Uncategorized

ಕಳ್ಳಿ-ಹೂ

ಕೆಲವರು ನನ್ನ ಮೈಮಾಟ ಕಂಡರು
ಇನ್ನು ಕೆಲವರು ನನ್ನ
ಕಣ್ಣುಗಳ ಕೊಂಡಾಡಿದರು ಆದರೆ
ನನ್ನ ಮೌನ ಅರಿತವನು ಅವನೊಬ್ಬನೇ….

ಹರೆಯದ ಅವಸರದಲ್ಲಿ
ಹಾಸಿಗೆಯ ಕಾವು ಬಯಸಿದವರೆ
ಹೆಚ್ಚು, ಆದರೆ ಅವನು ಮಾತ್ರ
ನನ್ನ ತಿಳಿಯಲು ಬಯಸಿದ….

ಬೆತ್ತಲೆ ಜಗತ್ತಿನಲ್ಲಿ
ನಗ್ನ ದೇವತೆಯಾದ
ನನಗೆ
ವಸ್ತ್ರ ಉಡಿಸಲು ಬಂದವನು….

ಕತ್ತಲೆ ಜಗತ್ತಿನಲ್ಲಿ ಕಣ್ಮರೆಯಾದ
ನನಗೆ, ಕೆಂಪುನಗರದಿಂದ
ವಿಮುಕ್ತಿ ಕೊಡಲು ಬಂದಿರೊ
ಬಾಂಧವ ಇನಿಯಾ..‌‌..

ಇದೆಲ್ಲ ಎಲ್ಲಿಗೆ , ಎಂದು
ನನ್ನ ಹಣ್ಣಾದ ಮೊಲೆಗಳಿಗು
ಅವನ ನೆರೆತ ಎದೆಯ ಕೊದಲಿಗು
ಸಾಗರಗಳ ದಾಟಿದ ಪ್ರೀತಿ ತಿಳಿದೀತೆ..‌..

ಪ್ರೀತಿಗೆ ವಯಸ್ಸಿಲ್ಲವಾದರು
ದೇಹಕ್ಕೆ ಇದೆ ಎಂಬ ಅರಿವಿದೆ
ದಡಕ್ಕೆ ಬಂದಮೇಲೆ ದಣಿವಾದರೆ
ದೇಹದ ತಪ್ಪೇ….

ಜಗದೀಶ್ ಜಾಗ್ವಾರ್

Uncategorized

ಶಿವಕುಮಾರ

ಇವನೊಂತರ, ಇವನು
ಒಂದು-ತರ, ಯಾಕೆಂದು
ಉತ್ತರವಿಲ್ಲ, ಇವನು
ನಮ್ಮಂತೆ ಅಲ್ಲ.‌‌…

ದಿನಕ್ಕೆ ಎರಡು ಬಾರಿ
ಮಾತ್ರೆ ನುಂಗುವ, ಯಾವಗಲೂ
ಕಲ್ಪನೆಯಲ್ಲಿ ಇರುವ
ಇವನು ಒಂಥರಾ….

ಎಲ್ಲರೊಡನೆ ಬೇರೆಯುವ
ನಗು ನಗುತ್ತಾ ಮಾತನಾಡುವ
ಮಂದ ಬುದ್ಧಿಯಾದರೂ
ಅಕ್ಷರಸ್ಥ….

ಮೋಸ, ಕಪಟ,ದ್ರೋಹ
ತಿಳಿಯದವ ಆದರೆ
ಹುಟ್ಟು ಸೊಂಬೆರಿ
ಸಿದ್ಧ….

ಸಿಂಗಾನಲ್ಲೂರಿನ ಸೊಂಬೆರಿ
ಸಿದ್ಧ, ಎಲ್ಲಾ ತಿಳಿದು
ಮೈ ಬಗ್ಗಿಸಿ ದುಡಿಯಲು
ಮಖ ತಿರುಗಿಸುವ

ಇವನೇ ನಮ್ಮ ಶಿವಕುಮಾರ….

Uncategorized

ಅವಳ ಕೇಶರಾಶಿ

ಕೂದಲು ಹಾರಾಡಿದ ಬೆನ್ನು
ನೋಡುವುದೆ ಅಂದ,
ಇನ್ನು ಅವುಗಳನ್ನು ನನ್ನ ಮೊಗದಿಂದ
ಸೊಕಿಸಿ ಬಿಡುವೆ ಒಮ್ಮೆ ಗೆಳತಿ….

ಮುಂಜಾನೆ ಎದ್ದು ಪಕ್ಕದಲ್ಲಿ
ನೋಡಲು ನೀನಿಲ್ಲ ಜಳಕದ
ಕೋಣೆಯಿಂದ ನಿ ಬಂದು ಕೂದಲು
ನನ್ನ ಮೊಗಕ್ಕೆ ಸೊಕಿಸಲು ಏನೆಂದು ಹೇಳಲಿ ಗೆಳತಿ….ನಾನಗಾಗಿ ನೀ ಬಿಸಿ ನೀರು
ಕಾಯಿಸಿ, ಬೆನ್ನ ನೇವರಿಸಲು
ಮಂಜಿನ ಮುಂಜಾನೆ
ಮೋಹಕವಾಗಿತ್ತು….

ನಿನ್ನಂದವೆ ನಿನ್ನ ಆ, ಕೇಶರಾಶಿ
ರೇಷ್ಮೆಮೆಯೆ ನಾಚುವಂತ ಮೃದು,
ನಿನ್ನ ಮೃದುಲ ಕೇಶವ ಸೋಕಿಸಿ
ಕಾಮನ ಬಿಲ್ಲಿನ ಕಾಡಿಗೆಗೆ
ಹದರದಿ ಚುಂಬಿಸಲೆ….

ನೀನಿಲ್ಲದೆ ಏನಿಲ್ಲ
ಸೃಷ್ಟಿಯು ನೀನು,ಸರ್ವಾವು ನೀನು
ನಿನ್ನ ಮಡಿಲ ಕೊಡುವೆಯ
ನಿನ್ನ ಪ್ರೀತಿಯ ಸಾಗರವ ನಾನಗಾಗಿ ಮುಡಿಪು ಇಡುವೆಯ….

ಜಗದೀಶ್ ಜಾಗ್ವಾರ್

Nonfictional

ಬೃಹನ್ನಳೆ

ಗಂಡೆಂದರು ಗಂಡೆಂದರು
ಜನಿಸಿದಗ ಗಂಡೆಂದರು
ಬಾಳಿದೆ ಗಂಡಂತೆ
ಬದುಕಿದೆ ಗಂಡಂತೆ
ಬರುಬರುತ ಆಸೆಯಾಯಿತು
ಹೆಣ್ಣಾಗುವಂತೆ….

ಚೌರಿಕೆ ಮಾಡಿಸಲಿಲ್ಲ
ಉಗುರಿಗೆ ಬಣ್ಣ
ಮಾಡುವುದು ಶುರುವಾಯಿತಲ್ಲ
ಕಾಲುಂಗುರ ಬೇಕಿನೆಸಿತು
ಕೈ ಬಳೆ ಕರೆದವು
ಕಾಲು ಗೆಜ್ಜೆ ಕುಣಿದವು
ಉಡುವು ಸಂಪೂರ್ಣ
ಬದಲಾಯಿತು.‌‌…

ಮನೆಯಲ್ಲಿ, ತೊರೆದರು ಎಲ್ಲ
ಅಪ್ಪ ಹೊಡೆದ, ಅಮ್ಮ ಅತ್ತಳು
ಸಹೋದರ,
ಸಹೋದರಿಯರು,
ಅಸಹ್ಯ ಪಟ್ಟರು
ಇನ್ನೆಲ್ಲಿ
ಮನೆಯಲ್ಲಿ,
ಜಾಗ….

ದೈಹಿಕವಾಗಿ ಹೆಣ್ಣದೆ
ದೈನಂದಿನ ಬದುಕಿನಲ್ಲಿ
ನಾಯಿಯಾದೆ
ಸಮಾಜ
ಸೆರಗಾಸುವರಿಗಿಂತ ಕಡೆಯಾಗಿ
ನೋಡಿತು….

ನನ್ನ ರೀತಿಗೆ ಯಾರು ಕಾರಣ ?
ಯಾರು ಹೊಣೆಗಾರ ?
ತಿಳಿಯಲಿಲ್ಲ ದೇವರೆಂದು ಯಾರೊ
ಇರುವನಂತೆ ಹುಡುಕುತ್ತಿರುವೆ ಸಿಕ್ಕರೆ
ತಿಳಿಸಿ….

ಅಸಹ್ಯ ನಾವಲ್ಲ,
ಅದ ನುಡಿಯುವ ನಿನ್ನ ಬಾಯಿ,
ಆತ್ಮ ಗೌರವದಿಂದ ಬದುಕುವ ಆಸೆ,
ನಮಗೊಂದು ಕೆಲಸ ಕೊಡಿ,
ನಮಗೊಂದು ಕೆಲಸ ಕೊಡಿ,
ನಮಗೂ ಹೊಟ್ಟೆ ಇದೆ
ಸಮಾಜದಲ್ಲಿ ಒಳ್ಳೆ ಸ್ಥಾನ ಮಾನ
ಕೊಡಿ….

ಜಗದೀಶ್ ಜಾಗ್ವಾರ್

#fable

ಕಾಡಿನಲ್ಲಿ ಸಿಂಹಗಳು ಮಾಡಿದ್ದೆಲ್ಲ ಸರಿಯಿಲ್ಲ

ಅಲ್ಲೊಂದು ಸುಂದರ ಕಾಡು, ಕಾಡಿನಲ್ಲಿ ಸಿಂಹಗಳದ್ದೇ ದರ್ಬಾರು ಕಾಡಿನ ರಾಜ ಸಿಂಹ ಎಲ್ಲರೂ, ಇಡೀ ಕಾಡಿನ ಪ್ರಜೆಗಳು ಸಿಂಹವನ್ನು ತಮ್ಮ ನಾಯಕನೆಂದು ಭಾವಿಸಿದ್ದವು ಹಾಗೂ ಅವುಗಳನ್ನು ನಂಬಿ ಬಹುಮತ ಕೊಟ್ಟು ಪ್ರತಿ ಬಾರಿಯ ಕಾಡಿನ ಚುನಾವಣೆಯಲ್ಲಿ ಸಿಂಹವನ್ನು ಗೆಲ್ಲಿಸುತ್ತಿದ್ದವು. ಸಿಂಹವು ಅದಕ್ಕೆ ತಕ್ಕಂತೆ ಕಾಡಿನ ಉಳಿದ ಪ್ರಾಣಿಗಳಾದ ನರಿ,ಜಿಂಕೆ, ಕರಡಿ, ಚಿರತೆ,ಹುಲಿ,ಇರುವೆ,ತೋಳ,ಹದ್ದು,ಗೂಬೆ,ಕುರಿ,ಆಮೆ ಎಲ್ಲಾರನ್ನು ಕೇಸರಿ ಆಸಕ್ತಿಯಿಂದ ನೋಡಿಕೊಳ್ಳುತಿತ್ತು,

ಪ್ರತಿ ಬಾರಿಯೂ ಕಣ್ಣು ಕಟ್ಟುವ ಹೊಸ, ಯೋಜನೆಗಳನ್ನು ಸುಳ್ಳು ಆಶ್ವಾಸನೆಗಳು ಹಾಗೂ ಅಭಿವೃದ್ಧಿ ಜಪದ ಹಿಂದೆ ತನ್ನ ಪಕ್ಷದ ಹಿತಾಸಕ್ತಿ ಕಾಯುವುದನ್ನೆ ಕೆಲಸಮಾಡಿಕೊಂಡಿತ್ತು, ಇದರದ್ದು ತಪ್ಪಿಲ್ಲ ಕಾರಣ ಸಿಂಹಕ್ಕೆ ಸರಿಯಾದ ಪೈಪೋಟಿ ಕೊಡುವ ಕೊರತೆ, ಕಾಡಿನಲ್ಲಿ ಹೆಮ್ಮಾರವಾಗಿ ಕಾಣತೊಡಗಿತ್ತು ಕೋಡಂಗಿ ಪಕ್ಷ ಅವನತಿ ಹಾದಿ ಇಡಿದರೆ ಇತ್ತ ಕಮ್ಮುಗಳು ಕಣ್ಣುತೆರದಿರಲಿಲ್ಲ ಈ ನಡುವೆ ಕಾಡಿನ ಆಳ್ವಿಕೆ ಸಿಂಹಗಳ ಕೈಯಲ್ಲಿರುವುದರಿಂದ, ವಿರುದ್ಧ ಮಾತಾನಾಡಿದಲ್ಲಿ ಕಾಡಿನ ವಿರೋಧಿ ಎಂದು ಬೋನಿಗೆ ತಳ್ಳುತಿದ್ದವು.

ಇನ್ನು ಆಳ್ವಿಕೆ ಅಭಿವೃದ್ಧಿ ಹೆಸರಿನಲ್ಲಿ ಕಾಡು ತುಕ್ಕು ಇಡಿಯುತಿತ್ತು ಕಾಡಿನ ಬೆಳವಣಿಗೆ ಹಾಗೂ ಉತ್ಪನ್ನ ಇಳಿಯುತಿತ್ತು ಕಾರಣ ಕಾಡನ್ನು ಅಭಿವೃದ್ಧಿ ಮಾಡುತ್ತೆವೆ, ಎಲ್ಲೆಲ್ಲಿಯೂ ಸುಗಂಧ ಹರಡುವಂತೆ ಮಾಡುತ್ತೆವೆ, ಜಿಂಕೆ ಬಲಿ ತಪ್ಪಿಸುತ್ತೆವೆ, ಕುರಿಗಳ ರಕ್ಷಸುತ್ತೆವೆ ಎಂದೆಲ್ಲ ಹುಚ್ಚು ಆಶ್ವಾಸನೆ ಕೊಟ್ಟು,

ಸದ್ಯಕ್ಕೆ ಇರುವ ಮರಗಳನ್ನು ಕಡಿದು ಎಲ್ಲೆಲ್ಲಿಯೂ ಶ್ರೀ ಗಂಧ ಮರ ನೇಡೊಣ ಎಂದು ಹೇಳಿ ಇರುವ ಮರಗಳನ್ನು ಒಮ್ಮೆಲೇ ಅರ್ಧರಾತ್ರಿ ಕಡಿದು ರಾತ್ರೋರಾತ್ರಿ ಶ್ರೀಗಂಧ ಬೆಳೆಯುವ ಕನಸುಕಂಡು ತಾವೆ ತೋಡಿದ ತಮ್ಮದೇ ಪ್ರಪಾತಕ್ಕೆ ಸಿಂಹಗಳು ನೆಗೆದವು ಇತ್ತ ಕಾಡಿನಲ್ಲಿರುವ ಬೇರೆ ಪಕ್ಷ , ಸಂಘಟನೆಗಳು ಸಿಂಹಗಳ ಮೇಲೆ ಹರೆಹಯ್ದಾರು ಏನೂ ಕಿತ್ತುಕೊಳ್ಳಲಾಗಿದೆ, ಕೈ ಲಾಡೊ ಗೊಂಬೆಗಳಾದರೆ ಅತ್ತ ಕಾಡಿನ ಕುರಿಗಳು ಯಾರೂ ಸಮರ್ಥರು ಸಿಗದೆ ಸಾಕಾಗಿ.

ಗುರಿಯು ತಿಳಿಯದೆ ಹಾದಿಯು ತಿಳಿಯದೆ ಜೈ ಜೈ ಎಂದು ತಮ್ಮ ಕರ್ತವ್ಯದಂತೆ ನಟಿಸುತ್ತಿವೆ, ಕತ್ತಲಲ್ಲಿ ದಾರಿಕಾಣದೆ ರಾತ್ರಿ ಕಂಡ ಬಾವಿಗೆ ಹಗಲು ಸಮೂಹ ಸಮೇತ ಬಿದ್ದು ಅವನತಿ ಇಡಿದು ಕಾಡಿನ ಅಭಿವೃದ್ಧಿ ಕಳೆದುಹೋಗಿದೆ.

ಇನ್ನು ಕಾಡಿನ ಯುವಪ್ರಾಣಿಗಳು ಕೆಲಸವಿಲ್ಲದೆ ಇದ್ದಾರೆ, ಇನ್ನು ಕಾಡಿನ ಉದ್ಯಮಿಗಳು ಕಾಕ್ಕಬಿಕ್ಕಿಯಾಗಿದ್ದರೆ ಈ ನಡುವೆ ಕಮ್ಮುಗಳು ಕಾಡಿನಲ್ಲಿ ಸಿಂಹ ನಡೆಯ ವಿರುದ್ಧ ಹೋರಾಡಿದರೆ ,ಪ್ರಶ್ನೆಸಿದರೆ ಕಾಡಿನ ವಿರೋಧಿಗಳೆಂದು ಹಣೆಪಟ್ಟಿಕಟ್ಟಿ ಪ್ರಶ್ನೆ ಮಾಡಿದವರನ್ನೆಲ್ಲ ಬೊನಿಗೆ ಹಾಕಲಾಗುತ್ತಿದೆ.

ಕಾಡಿನಲ್ಲಿ ಎಲ್ಲಿದೆ ಸ್ವಾತಂತ್ರ್ಯ ಇನ್ನು ಕಾಡ ಕಾಯಲು ಪ್ರಕೃತಿ ದೇವಿ ಎಂದು ಕಾಳಿಯ ನರ್ತನ ತಾಳಿಯಳೊ ಗೊತ್ತಿಲ್ಲ, ಆದರೆ ಅ ಸಮಯ ದೂರವಿಲ್ಲ.

ಜಗದೀಶ್ ಜಾಗ್ವಾರ್

Fictional

ಯಾರಿವಳು……..?

ಒಂದು ರೀತಿಯ ಬಿಸಿ ಅನುಭವ ಜ್ವಾಲಾಮುಖಿ ಮೇಲೆ ಮನಗಿದ್ದೇನೊ ಇಲ್ಲ ನೆಲದ ಮೇಲೊ ತಿಳಿಯುತ್ತಿಲ್ಲ, ಬಿಸಿ ಅನುಭವ ಮೈಯೆಲ್ಲಾ ಬೆಚ್ಚಗಾಗುತ್ತಿದೆ ಬೆವರುತ್ತಿದ್ದೆನೆ ಈ ನಡುವೆ ಸೊಳ್ಳೆಗಳು ಏನನ್ನೂ ಕೇಳದಿ ರಕ್ತ ಹಿರುತ್ತಿದ್ದವು, ಇಗೆ ಕಣ್ಣು ಮುಚ್ಚಿರುವಾಗ ಒಮ್ಮೆಲೇ ನನ್ನ ಬೆಂಗಳೂರು ಬದುಕು ಆ ವೈಭೊಗದ ಜೀವನ ಜ್ಞಾನಪಕಕ್ಕೆ ಬಂತು, ಏನನ್ನೂ ಮಾಡದೆ ಆರಾಮಾಗಿ ಇದ್ದ ಕಾಲವದು.

ಈ ಬ್ಯಾಚುಲರ್ ಜೀವನದ ಮಜಲುಗಳಿಗೆ ತೆರೆದು ಕೊಳ್ಳದ ನಾನು ರಾಜನಂತೆ ಇದ್ದೆ ಅಡಿಯಿಂದ ಮುಡಿಯವರೆಗೆ ನನ್ನ ಮಾತೆ ನಡೆಯುತ್ತಿತ್ತು ಆದರೆ ಯಾಕೊ ಈ ಹೊಸ ಹಾಸ್ಟೆಲ್ ಜೀವನ ನೋಡಿರದ ಇನ್ನಷ್ಟು ಮಾನವ ಹೊಸ ಮುಖಗಳ ಪರಿಚಯಿಸುತ್ತಿದೆ.

ಇಗೆ ಆಳವಾದ ಯೋಚನೆಯಲ್ಲಿ ಇರುವಾಗಲೆ, ಎಲ್ಲೊ ಅಮ್ಮ ಎಬ್ಬಿಸಿದಂತಾಗಿ ಏಳಲು ಮುಂತಾದಗ ಅಲ್ಲಿ ಯಾರು ಇರಲಿಲ್ಲ, ಎಷ್ಟಾದರೂ ಮಾನವ ಸಂಘಜೀವಿ ಒಬ್ಬನೆ ಎಲ್ಲಿಯವರೆಗೆ ಎಗಿಯಾನು ಎಂದು ನಕ್ಕು ಮತ್ತೆ ಹಸಿಗೆ ಇಡಿದೆ.

ಆದರೆ ನಿದ್ದೆ ಹಾರಿಹೋದ ಪರಿಣಾಮ ಕೆಲವೆ ಸೆಕೆಂಡುಗಳಲ್ಲಿ ಎದ್ದು ಕೂತು ಗಡಿಯಾರವ ದಿಟ್ಟಿಸಿದೆ ಏನೋ ಪಡೆಯುವ ಹಂಬಲ ಮತ್ತೇನೂ ಕಳೆದುಕೊಂಡ ನೋವು ಯಾಕೋ ತಲೆಸುತ್ತಿದ ರೀತಿಯಾಗಿ ದಿಂಬಿಗೆ ತಲೆ ಇಟ್ಟೆ ಈಗೆ ಒಂದಷ್ಟು ಪ್ರೀತಿಯ ಗೀತೆಗಳ ಮೊಬೈಲ್ ಗುನುಗಲು ಆಗೆ ಆಳೆ ಪ್ರೇಯಸಿ ರು ಹೊಂದಷ್ಟು ಹೊಸ ಕ್ರಶ್ ಗಳು ನೆನೆಯುತ್ತಾ ಮನಗಿದ್ದೆ, ಹಬ್ಬದ ರಜೆಯಾದ ಕಾರಣ ಗೆಳೆಯರು ಊರಿಗೆ ಹೋದರು ಯಾಕೊ ಊರಿಗೆ ಹೋಗಲು ಮನಸ್ಸಿಲ್ಲದೆ ಹಾಸ್ಟೆಲ್ ಗೋಡೆಗಳ ದಿಟ್ಟಿಸುತ್ತ ಬುದ್ಧನ ಮೂರ್ತಿಯ ದಿಟ್ಟಿಸಿ ನೋಡುತ್ತಾ ಕೂಳಿತ್ತಿರುತ್ತಿದ್ದೆ

ಇತ್ತ ಗೆಳೆಯತಿಯರು ಹಬ್ಬದಲ್ಲಿ ನಿರುತರಾದರೂ ಊರಿಗೆ ಬಿಟ್ಟ ಬಿದಿ ಬಸವನಂತೆ ಕ್ಯಾಂಪಸ್ ಹುಚ್ಚಾಪಟ್ಟೆ ಸುತ್ತಿ ಸುತ್ತಿ ಸಾಕಾಗಿ ಗ್ರಂಥಾಲಯದಿಂದ ತಂದ ಮಾರ್ಕ್ ಟುನ್ಗೆಟ್ಗೆ ಅವರ “ಮೀಡಿಯಾ ಮೋನಲತೀ ಸ್” ಪುಸ್ತಕ ತಿರುವಾಕುತ್ತ ಇಗೆ ಸಮಯ ಸಾಗಿತ್ತು ಇನ್ನೂ ರಾತ್ರಿಯಾದರೆ ಊಟಮುಗಿಸಿ ವಿವಿಯ ಬೆಳಕಿನ ಹಬ್ಭವ ನೋಡುವುದೆ ಖುಷಿ‌ ಹಾಗೂ ವಿವಿ ಮುಖ್ಯದ್ವಾರದ

ದೀಪಾಲಂಕಾರ ಹಾಗೂ ಕುವೆಂಪುರವರ ಹಸ್ಮನುಮುಖಿ ಮೊಗವ ನೋಡುವುದೆ ಅಂದ ಮಾನಸಗಂಗೋತ್ರಿಯ ಎಂಬ ಹಸಿರು ಮನೆಯ ಮಗುವಾಗಿ
ಬಿಡುತ್ತೆವೆ , ವಿವಿಯ ಕ್ಯಾಂಪಸ್ ಬಗ್ಗೆ ಹೇಳಲು ಮುಂದಾದರೆ ಎಲ್ಲೆಲ್ಲಿಯು ಹಸಿರು ಹುಲ್ಲುಗಳು ಹೂಗಳುಮತ್ತು ಮರಗಳು ಶಾಂತಿಗಾಗಿ ಬುದ್ಧ, ವಿದ್ಯೆಯ ಪ್ರತಿರೂಪವಾಗಿ ಅಂಬೇಡ್ಕರ್
ವಿಶ್ವಮಾನವ ಕುವೆಂಪು ಈಗೆ ದಿಗ್ಗಜರು ಗಂಗೋತ್ರಿಯ ಆವರಿಸಿರುವಾಗ.ಹೇಗೆ ಇದನ್ನು ಬಿಡಲು ಮನಸ್ಸಾದೀತು…

ಜಗದೀಶ್ ಜಾಗ್ವಾರ್

travel log

ಆಕಸ್ಮಿಕ ಪಯಣದ ಆಗಂತುಕ

ಎಂದಿನಂತೆ ಎಲ್ಲರೂ ತರಗತಿಯ ಗೆಳೆಯರ ಆಶಯದಂತೆ ಕೊನೆಯ ದಿನದ ಯುವಸಂಭ್ರಮಕ್ಕೆ ಸೇರುವುದು ಎಂದು ತೀರ್ಮಾನವಾಯಿತು ಎಲ್ಲರೂ ತಮ್ಮ ಮಾತಿನಂತೆ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿ ನಂತರ ಹುಡುಗರೆಲ್ಲ ಸೇರಿ ಚಿಕ್ಕದೊಂದು ಪಾರ್ಟಿ ಮಾಡೋಣವೆಂದು ಮಾತನಾಡುವಾಗ, ಆಕಸ್ಮಿಕವಾಗಿ ಲಾಂಗ್ ಡ್ರೈವ್ ಹೋಗೊಣ ಎಂದು ಮಾತಾಡಿಕೊಂಡು ಇದ್ದವರಲ್ಲೆ ಏಳು ಜನ ಹೋರಡಲು ಮುಂದಾದೆವು

ಈ ಪ್ಲಾನ ರೂವಾರಿ ಯಾದ ಅಭಿ ಇನ್ನೂ ಉಳಿದ ಸ್ನೇಹಿತರಾದ ರವಿ,ಶರತ್,ತಂಗಮ್,ಕಲಾಭಂಡರ್ ಆದರ್ಶ , ಹಾಗೂ ಆದರ್ಶ ಮುನ್ನುಗ್ಗಿದೆವು ಇಗೆ ನಮ್ಮ ಪಯಣದ ಸಿದ್ಧತೆ ಶುರುವಾಯಿತು ಕಾರ್ ರೆಡಿ ಮಾಡಿ ಪೆಟ್ರೋಲ್ ಹಾಕಿಸಿ ಪಯಣ ಮೈಸೂರಿನಿಂದ ಮಡಿಕೇರಿ ಯತ್ತ ಶುರುವಾಯಿತು ಹೀಗೆ ಮುಂದುವರಿದು ದಾರಿಯಲ್ಲಿ ಸಾಗುತ್ತ ಹೋದೆವು ನಂತರ ಮೊದಲೇ ಊಟ ಮುಗಿಸಿದ್ದ ಕಾರಣ ನಡುವೆ ಪರಿಚಿತ ನೊಬ್ಬರನು ಸಂದಿಸಿ ಕುರುಕಲು ತಿಂಡಿ ತಿಂದು ಮುನ್ನಡೆದೆವು ಆದರೆ ದಾರಿಯಲ್ಲಿ ಪ್ಲಾನ್ ಬದಲಾಯಿತು ನಿಸರ್ಗಧಾಮ ಭೇಟಿ ಕೊಡುವ ಎಂದು ತೀರ್ಮಾನವಾಯಿತು ಸಮಯಕ್ಕೆ ಮುಂಚೆ ತಲುಪಿದ ಕಾರಣ ಕಾರಿನಲ್ಲಿ ನಿದ್ರಿಸಿ ಬೆಳಕಾಗುತ್ತಿದ್ದಂತೆ

ನಮಗೆ ಅನುಭವವಾದ ವಿಚಿತ್ರದಿಂದ ಅದನ್ನು ಬಿಟ್ಟು ವಾಪಸ್ ಆಗುವ ನಿರ್ಧಾರ ಮಾಡಿದೆವು,
ಅದೆ ಒಬ್ಬ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ನಿಂತು ತಲೆಗೆ ಹೆಲ್ಮೇಟ್ ದರಿಸಿ ಶರವೇಗದಲ್ಲಿ ಚಲಿಸುವ ಲಾರಿಯನ್ನು ತಡೆ ಇಡಿದು ನಿಲ್ಲಿಸುತ್ತಿದ್ದ ನಮಗೆಲ್ಲ ಅವನ ಕೆಲಸ ನೋಡಿ ಮೈಎಲ್ಲ ಜುಮ್ಮುಎನಿಸಿದ್ದು ಸುಳ್ಳಲ್ಲ, ಅಲ್ಲೇನು ನಡೆಯುತ್ತಿದೆ ಎಂದು ನೋಡಲು ಮುಂದಾದಾಗ ತಿಳಿದದ್ದು ಅವನು ಮಾನಸಿಕ ಅಸ್ತವ್ಯಸ್ತ ಎಂದು ಹಾಗೂ ಗಂಟಲು ತುಂಬಾ ಕುಡಿದಿದ್ದ ನಂತರ ಕಾರಿನಿಂದ ಇಳಿದು ವಿಚಾರ ತಿಳಿದು ಇಲ್ಲಿ ಉಳಿಯುವುದು ತರವಲ್ಲ ಎಂದು ವಾಪಸ್ ಹೋಗಲು ನಿರ್ಧರಿಸಿದೆವು ನಂತರ ಬೆಳಗಾಗುವರಿಗೆ ಕಾಯ್ದು ನಂತರ ಪಯಣ ಮುಂದುವರಿಸಿದೆವು‌‌. ಯಾವುದೊ ಲಾರಿಯ ಆಯುಧ ಪೂಜೆ ಆಹಾರ ವಾಗುತ್ತಾನೊ.

ಜಗದೀಶ್ ಜಾಗ್ವಾರ್