ಅವಳಿಗೊಬ್ಬ ಇವನು

ಅವಳಲ್ಲಿನೊ ಇದೆ
ಅದು ಇವನಿಗೆ ಕಂಡಿತು
ಇವನಲ್ಲಿನೊ ಇದೆ
ಅದು ಅವಳಿಗೆ ಕಂಡಿತು…..

ಒಂದು ನೋಟ
ಎರಡು ಕಣ್ಣು
ಮೂರರಲ್ಲಿ ಮನಸ್ಸಿನ ಮಿಲನ….

ಕೊರೆಯುವ ಚಳಿಯ
ಗಾಡ ರಾತ್ರಿಯ ಹೊತ್ತು
ಕನಸಿನಲ್ಲಿ ಅವನದೆ ಕಸೂತಿ
ಇನ್ನು ಇವನು ನಿದ್ರೆ ಇಲ್ಲದೆ ತೊಳಲಾಟ…..

ಪ್ರೇಮ ಗೀತೆಗಳೆ ಹಿತವಚನ
ಲವ್ ಸಿನಿಮಾಗಳೆ ಸುಭಾಷಿತ
ಹೀರೋ ಇವನದರೆ
ಅಲ್ಲಿ ಹಿರೋಯಿನ್ ಅವಳೆ…..

ಏನೇನೊ ಆಸೆ,ಕನಸಿದ್ದರು
ಮುಖ ನೋಡಿ ಮಾತನಾಡಲು
ಅರೆಯದ ಅಲೆಗಳ
ಬೆಳದಿಂಗಳ ಆಟ…..

ಎಲ್ಲೋ ಹತಾಶೆಯಲ್ಲಿರುವ
ಅವಳಿಗೆ ಇವನೆ ಅಮೃತ
ಇವನ ಬರಡು ಭೂಮಿಗೆ
ಅವಳೆ ಮುಂಗಾರು….

ಕಾಮದ ಹಂಗಿಲ್ಲದೆ
ದೇಹದ ದಾಹವಿಲ್ಲದೆ
ಇಬ್ಬರ ಸಂತಸದಲ್ಲಿ
ಅರಳಿದ ನಿರ್ಮಲ ಕೆಂಪು ಗುಲಾಬಿ

ಏನೆಂದು ಹೆಸರಿಡಲಿ…….?
ಅರೆಯದ ಪ್ರೇಮವೇ…….?
ಆಕರ್ಷಣೆಯ ಆಮಲೆ…….?
ಬಿಸಿ ಯೌವನದ ಭಾವನೆಯೇ…….?

ಜಗದೀಶ್ ಜಾಗ್ವಾರ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s