ಯಾರು ನೀನು ?

       ಯಾರು ನೀನು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಮೊದ ಮೊದಲು ಹುಚ್ಚರ ಕೆಲಸ ಎನಿಸಿದರೂ, ಪದೇ ಪದೇ ಕೇಳಿದಾಗ ಪ್ರಶ್ನೆಯ ಅಂತರಾಳಕ್ಕೆ ಇಳಿದಾಗ ಉತ್ತರದ ಹಾದಿಯಲ್ಲಿ ನನಗೆ ಗೊತ್ತಿಲ್ಲದ ನಾನು ಸಿಗುತ್ತೇನೆ.

ಯಾರು ನೀನು ? ಸೋ ಕಾಲ್ಡ್ ಅಪ್ಪನ ಮಗ,   ಏ ಅದಲ್ಲ
ಯಾರು ನೀನು ? ನಾನುಇಂತಹ ಹೆಸರಿನವನು, ಏ ಹುಚ್ಚ
ಯಾರು ನೀನು ? ನಾನು ನಾನು ಮಾನವ,  ಅ ಹಾ ಹಾ… ಅಹ.. ಹ.. ಹಾ… ಯಾರಪ್ಪ ನೀನು
ಯಾರು ನೀನು ? ನಾನು ಈಕೆ ಗಂಡ, ಇವರ ಅಪ್ಪ , ಇವರ ಸಹೋದರ,ಸಹೋದರಿ  ಯಾರು ನೀ ಎಂದು ತಿಳಿದಿರುವೆ ಅದು ನೀನಲ್ಲ.

      ನೀನು ತಿಳಿಯಬೇಕಿರುವುದು ಯಾರು ನೀನು, ಇನ್ನೋಬ್ಬರ ಖುಷಿಯಲ್ಲಿ ಇರುವವನ ನೀನು, ಇಲ್ಲ ಇನ್ನೋಬ್ಬರಲ್ಲಿ ಖುಷಿತರುವವನ, ಯಾರು ನೀನು ನಿನ್ನ ವೀರ್ಯದಿಂದ ಹುಟ್ಟಿದ ಜೀವದಲ್ಲಿ ಇರುವವನು ನೀನಾ….?  ನೀನು ಇದು ಯಾವುದು ಅಲ್ಲ. ಅನ್ನುವುದು ನೀನಾ ?

       ನೀನು ಆದಮ್ಯ , ಯೋಚನೆಗೆ ನಿಲುಕದ ಚೇತನ, ನೀನು ಎಲ್ಲಿಯು ನಿಮಿತ್ತವಲ್ಲ, ಯಾರಿಗೂ ಸಿಮೀತವಲ್ಲ, ಯಾವುದಕ್ಕೂ ನಿಯಮಿತವಲ್ಲ. ಎಲ್ಲೊರೂಳಗು ನೀನಿರುವೆ, ಎಲ್ಲಾದರಲ್ಲೂ ನೀನಿರುವೆ.

     ಓ ಚೇತನ ಹುಡುಕು ಎಲ್ಲಿರುವೆ , ಹೇಗಿರುವೆ , ನೀನೊಂದು ಶಕ್ತಿ, ನೀನೊಂದು ಶಾಂತಿ,ಜ್ಯೋತಿ,ಯುಕ್ತಿ,ಮುಕ್ತಿ,ದಾರಿಯ ದೀಪ್ತಿ.

   ನೀನು ಯಾರು ಹುಡುಕುತ್ತಾ ಹೊರಟಷ್ಟು ಮಾನವನಾಗುವೆ, ನಿಸ್ವಾರ್ಥ ನೀನು ಇನ್ನೋಬ್ಬರಲ್ಲಿ ಅರಳುವ ನಗು,

ಯಾರು ನೀನು  ?
       
      ಕನ್ನಡಿ ಮುಂದೆ ನಿಂತು ಈ ಪ್ರಶ್ನೆ ಕೇಳಿದಾಗ ಯಾವುದೊ ಕಾಣದ ಕತ್ತಲ ಪ್ರಪಾತಕ್ಕೆ ಕಾಣದ ಕೈಗಳು ಹಿಂದಿನಿಂದ ತಳ್ಳಿರುತ್ತವೆ. ಮನಸ್ಸು ಮೆದುಳು ಯಾರೆಂದು ತಿಳಿಯಲು ಹೆದರುತ್ತಾದೆ ಸತ್ಯ ಕಹಿ ಮೆದುಳು ತಾನು ಯಾರೆಂಬುದು, ತನಗೆ ಬೇಕಿಲ್ಲ.

ಅದೇ ಜೀವನದಲ್ಲಿ ಎಲ್ಲಾ ಮುಗಿದು ಸಾವಿನ ದಿನಗಳು ಎಣಿಸುವಾಗ ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಎಲ್ಲಾವು ನಶ್ವರವೆಂದು ಕಣ್ಣೀರಾಕಿದರೆ ಏನೂ ಬಂತು.

ನೀನೆಂಬುದು ನೀನಾಲ್ಲ, ನಾನೆಂಬುದನ್ನೆ ನೀನು ಎಂದು ಕೊಂಡಿದೆ ಪ್ರಪಂಚ ನೀನು ಯಾರೆಂದು ನೀನೆ ಯೋಚಿಸು.

ನಾಮಮಾತ್ರಕ್ಕೆ
ಜಗದೀಶ್ ಜಾಗ್ವಾರ್

2 comments

 1. puzzleblume · August 20

  Thank you for your interested visit on my blog, Jagdish Jaguar, and I wish I could understand more of your works on your own blog.
  As far as I understand the Google webtranslations, I think, you do a well composed writing, too complicated to be translated that way, so I think, unfortunately I miss a lot of the true meanings within.
  Keep up the good work and with kind regards from the North of Germany, Puzzleblume.

  Liked by 1 person

  • Jagdish jaguar · August 20

   Ohh thank you,
   Although you don’t know language,
   It’s really great, the way you tried to read my post.

   As soon as possible
   I will post in English.
   I am waiting to give a furnished one☺️🙏🙏🙏

   Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s