ಕೊರೊನ ಕಾರ್ಮೋಡ – 1

ಹಸುಗೂಸನ್ನು ಸಾಯಿಸಲು ಬಂದ ಹೆಮ್ಮಾರಿ ಹಸುಗೂಸು

ನನಗೆ ಹತ್ತು ತಿಂಗಳಂತೆ ಹತ್ತು ತಿಂಗಳು ಅಂದ್ರೆ ಏನು ? ಮೊದಲು ಹತ್ತು ಅಂದ್ರೆ ಏನು ಅಂತ ಹೇಳಿ, ಯಾಕೆ ಎಲ್ರೂ ನನ್ನ ನೋಡಿ ಕಣ್ಣೀರಾಕ್ತರೆ ನನ್ನ ಜೊತೆ ನನ್ನ ವಯಸ್ಸಿನ ನನ್ನದೆ ರೀತಿ ಮಕ್ಕಳು ಇದ್ದರೂ ಅದೇಕೋ ಸ್ವಲ್ಪ ದಿನ ಆದಮೇಲೆ ನನ್ನ ಅವರಿಂದ ಬೇರೆ ಇಟ್ಟರು , ಅಮ್ಮ ಅವಳ್ನಂತು ನಾನು ನೋಡೆ ಇಲ್ಲ ಹುಟ್ಟಿದ ಮೇಲೆ ಅವಳಿಗೆನೊ ಕೊರೊನ ಅಂತೆ , ಕರ್ಮ ಎದೆ ಹಾಲು ಬರಿ ಕನಸು.

ನಾನು ಹುಟ್ಟಿದಾಗಿಂದ ನೋಡಿರೊದು ಬರಿ ನೀಲಿ ಬಟ್ಟೆ ಜನ, ಆಮೇಲೆ ಉದ್ದ ಉದ್ದ ವೈರುಗಳು,ಸ್ಟ್ರೆಚರ್,ಬೇಡ್ ಆದೇನೊ ಬಾಯಿಗೆ ಒಂದು ಪೈಪು, ಮೈಯೆಲ್ಲಾ ವೈರುಗಳು ಸಿಗಿಸಿರುತ್ತಾರೆ.

ಅಮ್ಮನ ಹೊಟ್ಟೆಯೊಳಗೆ ಬೆಚ್ಚಗೆ ನೆಮ್ಮದಿಯಾಗಿದ್ದೆ  ಈ ಆಚೆ ಪ್ರಪಂಚ ನೋಡೊ ಆಸೆ ತುಂಬಾ ಇತ್ತು ಏನೇ ಹೇಳಿ ಅಂದುಕೊಂಡಷ್ಟು ಚೆನ್ನಾಗಿಲ್ಲ ಈ ಪ್ರಪಂಚ, ಮೊನ್ನೆ ನರ್ಸ್ ಅಂಟಿ ಏನೋ ಹೇಳ್ತಿದ್ರು ಕೇಳಿ ಭಯವಾಯಿತು ಯಾಕಂದ್ರೆ ಅಮ್ಮನ ಹೊಟ್ಟೆಯಲ್ಲಿ ಇದ್ದಾಗಲೇ ಚೆಕ್ಅಪ್ ಗೆ ಅಂತ ಹೋದಾಗ ಕೊರೊನ  ಎಷ್ಟು ಭಯಂಕರ ಎಂದು ವಿವರಿಸಿದರು ಡಾಕ್ಟರ್ ಕೇಳಿ ಹೊಟ್ಟೆಲೆ ನಡುಗಿದ್ದೆ,

ಮತ್ತೆ ನನಗೆ ಕೊರೊನ ಬಂದಿದೆ ಅಂತೆ ಯಾರನ್ನು ದೂರಲಿ ತುಂಬಾ ಕೋಪ ಬಂದು ಒದ್ದೆ , ಒದ್ದೆ‌. ನಿದ್ದೆ ಬಾರದೆ ಆಳ್ತಾ ಇದ್ದೆ ಅದೇನೋ ಕುಡಿಸಿ ನಿದ್ದೆ ಬರಿಸಿದ್ರು ಮತ್ತೆ ಡಾಕ್ಟರ್ ಈ ಮಧ್ಯೆ ಏನೋ ಆ ದೇವರು ಎಷ್ಟು ಕ್ರೂರಿ ಎಂದ, ಯಾರದು ಓ ಅವನ ಈ ಕೊರೊನ ಕಂಡುಹಿಡಿದ ಮನುಷ್ಯ ಅಂದುಕೊಂಡೆ ಆ ಯಪ್ಪ ಎಲ್ಲಿ ಸಿಗ್ತಾನೊ ಗೊತ್ತಿಲ್ಲ , ಆ ಜ್ಞಾನಪಕ ಬಂತು ಅಮ್ಮನ ಹೊಟ್ಟೆಲಿ ಇದ್ದಾಗ ಈ ಕೃಷ್ಣ,ರಾಮ,ಅಲ್ಲ,ಜೀಸಸ್ ಈ ಹೆಸರಿನವರನ್ನು ದೇವರು ಅಂತಾರಂತೆ ಅವರು ಅದೆಲ್ಲೋ ಕಾಣದ ಜಗತ್ತಿನಲ್ಲಿ ಇದ್ದರಂತೆ.

ನ್ಯಾಯ ಧರ್ಮ ಕಾಯ್ತರಂತೆ ನಾನು ಯಾವ ಪಾಪ ಮಾಡಿದ್ದೇನೊ ಕಾಣೆ, ಯಾಕೆ ಇಂಗೆ ಮಾಡಿದ ಅವರನ್ನ ಬೈ ಬಾರದಂತೆ ಅಮ್ಮ ಹೊಟ್ಟೆಯೊಳಗೆ ಇದ್ದಾಗ ಹೇಳಿದ್ಲು ಭಕ್ತಿಯಿಂದ ಬೇಡಿದರೆ ಕೇಳಿದ್ದು ಕೋಡ್ತಾರಂತೆ ನಾನು ಅನುಕ್ಷಣ ಅನುದಿನ ಬೇಡ್ತಾನೆ ಇದೀನಿ ನನಗ್ಯಾಕೆ ಕೊರೊನ ಅಂತ, ನನ್ನಿಂದ ಇದು ಬಿಟ್ಟರೆ ಸಾಕು ಎನಿಸಿದೆ, ನರ್ಸ್ ಅಂಟಿ ಹರಕೆ ಹೊತ್ತಿದ್ದರಂತೆ,

ಅಮ್ಮ,ಅಪ್ಪ ಇವರು ನನ್ನ ಜನನಕ್ಕೆ ಕಾರಣವಂತೆ ಇಬ್ಬರಿಗೂ ಕೊರೊನ , ನನ್ನ ಸಾಯಿಸುವ ಬದಲು ಯಾಕೆ ಎತ್ತರೊ ಗೊತ್ತಿಲ್ಲ , ಮತ್ತೆ ಅನಿಷ್ಟ ಅಂದ್ರೆ ಏನೋ ಯಾರಾದ್ರೂ ಹೇಳ್ತಿರಾ ಯಾಕಂದರೆ ನಮ್ಮ ತಾತ ಅನಿಷ್ಟ ಮುಂಡೆ ಮಗು ಯಾಕದ್ರು ? ಮನೇಲಿ ಹುಟ್ಟಿತೊ ಇದರಿಂದ ಮನೆಗೆ ಮಾರಿ ಬಂದಿದೆ, ಅನಿಷ್ಟದ ಮಗು ಅಂತ ಹೇಳಿದ್ರು ಅವರ ಮುಖ ಭಾವದಿಂದ ಏನೋ ಆಗಿದೆ ಅಂತ ಅನಿಸ್ತು , ಹೌದು ಯಾಕೆ ಅಂಗೆ ಅಂದ್ರು ನಾನು ಹೊಟ್ಟೆಲಿ ಇದ್ದಾಗ ನಮ್ಮ ಅಜ್ಜಿ ಅಂದ್ರೆ ಅದೇ ನಮ್ಮ ಅಪ್ಪನ ಅಮ್ಮ , ನನಮ್ಮನ ಅನಿಷ್ಟದವಳು ಕಾಲ್ಗುಣ ಸರಿಯಿಲ್ಲ ಅಂದ್ರು.

ನಾನು ಹೊಟ್ಟೆಲಿ ಇದೀನಿ ಅಂತ ಗೊತ್ತಾದ ಮರುದಿನ ದೇವಕೆ ಅಂದ್ರು ಹೌದು ನಾನು ಮಾರಿನ, ಯಾಕೊ ಒಂಥರಾ ನೋವು ಕಣ್ಣಲ್ಲಿ ನೀರು ಬಂದಂಗೆ ಆಯಿತು ಇದೇನಾ ದುಃಖ ಅಂದ್ರೆ ನಾನು ಬದುಕ್ತಿನೊ ಇಲ್ಲವೋ ಗೊತ್ತಿಲ್ಲ, ಆದ್ರೆ ಡಾಕ್ಟರ್ ಈ ರೀತಿ ಕೇಸ್ ಒಂದು ಮೊದಲೆ ದಾಖಲಾಗಿದೆ, ಅದ್ರೆ ಅಲ್ಲಿ ಮಗು ಚಿಕಿತ್ಸೆಗೆ ಪ್ರತಿಕ್ರಿಯಿಸಿ ಗುಣಮುಖವಾಗಿದೆ ಅಂತೆ,

ನಾನು ಗುಣಮುಖವಾಗಬೇಕು ದಯವಿಟ್ಟು ಎಲ್ಲರೂ ದೇವರಿಗೆ ಹೇಳಿ, ನಾನು ಹುಷಾರ್ ಆಗಬೇಕು.ಅಂತ ಪ್ಲೀಸ್ ಹೇಳಿ ಮರಿಬೇಡಿ.

ನಾಮಮಾತ್ರಕ್ಕೆ
ಜಗದೀಶ್ ಜಾಗ್ವಾರ್

2 comments

  1. sudha patil · August 5

    ಮಗುವಿನ ಸ್ವಗತ ಮನಮುಟ್ಟುವಂತಿದೆ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s