ಅರವಿಂದ ಸಮೇತ ವೀರ ರಾಘವ,

ಚಿತ್ರದ ಕೊನೆಯ ಬಹುಮುಖ್ಯ ,  ಸಂಭಾಷಣೆಯನ್ನು ನನಗೆ ಇಷ್ಟವಾದ ಕಾರಣ ತೆಲುಗಿನಿಂದ ಕನ್ನಡಕ್ಕೆ ಅನುವಾದ ಮಾಡಿರುತ್ತೆನೆ.

ಅನುವಾದ ಬಿ ಎಚ್ ಶ್ರೀ

ಏನು ಬರೀಲಿ ಅವಿ
ಇಬ್ಬರೂ ಮನಷ್ಯರು ಸಾಯ್ತ ಇದ್ದಾರೆ, ಅಂದ್ರೆ
ಇನ್ನಿಬ್ಬರು ನಿಂತು ನಾಟಕ ನೋಡೋ ಊರಿದು,
ಹೊಸದಾಗಿ ಏನು ಬರೀಲಿ ಅಂತೀಯ….‌1

ಇವನ ಐದು ವರ್ಷದ ಮಗುವಿನ
ಭವಿಷ್ಯ ಕೂಡ ಇವನೆ ಬರೀತಿದಾನೆ
ಬಾಂಬುಗಳಂತೆ, ಜೈಲಿಗೆ ಹೋಗಬೇಕಂತೆ
ಬೇಲಿನ ಮೇಲೆ ಬದುಕಬೇಕಂತೆ…2

ಆಗ ಅದೇ ಬಾಂಬ್ ಅವನ ಕೈಯಲ್ಲೆ ಸಿಡಿದರೆ
ಒಂಟಿ ಕೈ ಸುಬ್ಬನಿಗೆ ಇನ್ನೊಬ್ಬ ಒಂಟಿ ಕೈ ಸುಬ್ಬ
ಏನು ಬರೀಲಿ ಇವರಬಗ್ಗೆ….3

ರೋಷ ತುಂಬಿರೊ ಕಣ್ಣೀರಿನ ಬೀದಿಗಳು
ಒಣಗಿದ ಮಾವಿನ ಕಾಯಿ ನೇತಾಡೋ ಮನೆಗಳು
ನಿಶ್ಯಬ್ದವಾಗಿ ಅಳುವ ಊರುಗಳು…4

ಇವರು ರಕ್ತದಿಂದ ರುಜುವಾಕಿರೊ ಸೀಮ ಇದು
ಹೊಸದಾಗಿ ಇನ್ನೇನು ಬರೀಲಿ ಅವಿ….5

ರಕ್ತ ಹರಿದ ನೆಲದ ಮೇಲೆ ಹೂ ಬೆಳಿಬೇಕಂತ ನಾನು
ಇಲ್ಲ ಕತ್ತಿಗಳೆ ಘರ್ಜಿಸ್ತವಾಂತ ಅವನು
ಏನು ಉಳಿದಿದೆ ಬರಿಯೋಕೆ….6

ಇಬ್ಬರೂ ಬದುಕಬೇಕು ಅಂದ್ರೆ
ಮೂರು ಜನರನ್ನ ಸಾಯಿಸಬೇಕಾ

ಇದು ನಾನು ಬಯಸದ ಯುದ್ಧ
ಇಲ್ಲಿ ಸಾವು, ನೋವಿನದ್ದು ಒಂದೇ ಶಬ್ದ
ಏನು ಬರೀಲಿ ಅವಿ…7

CREDITS: ಮಾತಿನ ಮಾಂತ್ರಿಕ ತ್ರಿವಿಕ್ರಮ್

ಕೊರೊನ ಕಾರ್ಮೋಡ – 1

ಹಸುಗೂಸನ್ನು ಸಾಯಿಸಲು ಬಂದ ಹೆಮ್ಮಾರಿ ಹಸುಗೂಸು

ನನಗೆ ಹತ್ತು ತಿಂಗಳಂತೆ ಹತ್ತು ತಿಂಗಳು ಅಂದ್ರೆ ಏನು ? ಮೊದಲು ಹತ್ತು ಅಂದ್ರೆ ಏನು ಅಂತ ಹೇಳಿ, ಯಾಕೆ ಎಲ್ರೂ ನನ್ನ ನೋಡಿ ಕಣ್ಣೀರಾಕ್ತರೆ ನನ್ನ ಜೊತೆ ನನ್ನ ವಯಸ್ಸಿನ ನನ್ನದೆ ರೀತಿ ಮಕ್ಕಳು ಇದ್ದರೂ ಅದೇಕೋ ಸ್ವಲ್ಪ ದಿನ ಆದಮೇಲೆ ನನ್ನ ಅವರಿಂದ ಬೇರೆ ಇಟ್ಟರು , ಅಮ್ಮ ಅವಳ್ನಂತು ನಾನು ನೋಡೆ ಇಲ್ಲ ಹುಟ್ಟಿದ ಮೇಲೆ ಅವಳಿಗೆನೊ ಕೊರೊನ ಅಂತೆ , ಕರ್ಮ ಎದೆ ಹಾಲು ಬರಿ ಕನಸು.

ನಾನು ಹುಟ್ಟಿದಾಗಿಂದ ನೋಡಿರೊದು ಬರಿ ನೀಲಿ ಬಟ್ಟೆ ಜನ, ಆಮೇಲೆ ಉದ್ದ ಉದ್ದ ವೈರುಗಳು,ಸ್ಟ್ರೆಚರ್,ಬೇಡ್ ಆದೇನೊ ಬಾಯಿಗೆ ಒಂದು ಪೈಪು, ಮೈಯೆಲ್ಲಾ ವೈರುಗಳು ಸಿಗಿಸಿರುತ್ತಾರೆ.

ಅಮ್ಮನ ಹೊಟ್ಟೆಯೊಳಗೆ ಬೆಚ್ಚಗೆ ನೆಮ್ಮದಿಯಾಗಿದ್ದೆ  ಈ ಆಚೆ ಪ್ರಪಂಚ ನೋಡೊ ಆಸೆ ತುಂಬಾ ಇತ್ತು ಏನೇ ಹೇಳಿ ಅಂದುಕೊಂಡಷ್ಟು ಚೆನ್ನಾಗಿಲ್ಲ ಈ ಪ್ರಪಂಚ, ಮೊನ್ನೆ ನರ್ಸ್ ಅಂಟಿ ಏನೋ ಹೇಳ್ತಿದ್ರು ಕೇಳಿ ಭಯವಾಯಿತು ಯಾಕಂದ್ರೆ ಅಮ್ಮನ ಹೊಟ್ಟೆಯಲ್ಲಿ ಇದ್ದಾಗಲೇ ಚೆಕ್ಅಪ್ ಗೆ ಅಂತ ಹೋದಾಗ ಕೊರೊನ  ಎಷ್ಟು ಭಯಂಕರ ಎಂದು ವಿವರಿಸಿದರು ಡಾಕ್ಟರ್ ಕೇಳಿ ಹೊಟ್ಟೆಲೆ ನಡುಗಿದ್ದೆ,

ಮತ್ತೆ ನನಗೆ ಕೊರೊನ ಬಂದಿದೆ ಅಂತೆ ಯಾರನ್ನು ದೂರಲಿ ತುಂಬಾ ಕೋಪ ಬಂದು ಒದ್ದೆ , ಒದ್ದೆ‌. ನಿದ್ದೆ ಬಾರದೆ ಆಳ್ತಾ ಇದ್ದೆ ಅದೇನೋ ಕುಡಿಸಿ ನಿದ್ದೆ ಬರಿಸಿದ್ರು ಮತ್ತೆ ಡಾಕ್ಟರ್ ಈ ಮಧ್ಯೆ ಏನೋ ಆ ದೇವರು ಎಷ್ಟು ಕ್ರೂರಿ ಎಂದ, ಯಾರದು ಓ ಅವನ ಈ ಕೊರೊನ ಕಂಡುಹಿಡಿದ ಮನುಷ್ಯ ಅಂದುಕೊಂಡೆ ಆ ಯಪ್ಪ ಎಲ್ಲಿ ಸಿಗ್ತಾನೊ ಗೊತ್ತಿಲ್ಲ , ಆ ಜ್ಞಾನಪಕ ಬಂತು ಅಮ್ಮನ ಹೊಟ್ಟೆಲಿ ಇದ್ದಾಗ ಈ ಕೃಷ್ಣ,ರಾಮ,ಅಲ್ಲ,ಜೀಸಸ್ ಈ ಹೆಸರಿನವರನ್ನು ದೇವರು ಅಂತಾರಂತೆ ಅವರು ಅದೆಲ್ಲೋ ಕಾಣದ ಜಗತ್ತಿನಲ್ಲಿ ಇದ್ದರಂತೆ.

ನ್ಯಾಯ ಧರ್ಮ ಕಾಯ್ತರಂತೆ ನಾನು ಯಾವ ಪಾಪ ಮಾಡಿದ್ದೇನೊ ಕಾಣೆ, ಯಾಕೆ ಇಂಗೆ ಮಾಡಿದ ಅವರನ್ನ ಬೈ ಬಾರದಂತೆ ಅಮ್ಮ ಹೊಟ್ಟೆಯೊಳಗೆ ಇದ್ದಾಗ ಹೇಳಿದ್ಲು ಭಕ್ತಿಯಿಂದ ಬೇಡಿದರೆ ಕೇಳಿದ್ದು ಕೋಡ್ತಾರಂತೆ ನಾನು ಅನುಕ್ಷಣ ಅನುದಿನ ಬೇಡ್ತಾನೆ ಇದೀನಿ ನನಗ್ಯಾಕೆ ಕೊರೊನ ಅಂತ, ನನ್ನಿಂದ ಇದು ಬಿಟ್ಟರೆ ಸಾಕು ಎನಿಸಿದೆ, ನರ್ಸ್ ಅಂಟಿ ಹರಕೆ ಹೊತ್ತಿದ್ದರಂತೆ,

ಅಮ್ಮ,ಅಪ್ಪ ಇವರು ನನ್ನ ಜನನಕ್ಕೆ ಕಾರಣವಂತೆ ಇಬ್ಬರಿಗೂ ಕೊರೊನ , ನನ್ನ ಸಾಯಿಸುವ ಬದಲು ಯಾಕೆ ಎತ್ತರೊ ಗೊತ್ತಿಲ್ಲ , ಮತ್ತೆ ಅನಿಷ್ಟ ಅಂದ್ರೆ ಏನೋ ಯಾರಾದ್ರೂ ಹೇಳ್ತಿರಾ ಯಾಕಂದರೆ ನಮ್ಮ ತಾತ ಅನಿಷ್ಟ ಮುಂಡೆ ಮಗು ಯಾಕದ್ರು ? ಮನೇಲಿ ಹುಟ್ಟಿತೊ ಇದರಿಂದ ಮನೆಗೆ ಮಾರಿ ಬಂದಿದೆ, ಅನಿಷ್ಟದ ಮಗು ಅಂತ ಹೇಳಿದ್ರು ಅವರ ಮುಖ ಭಾವದಿಂದ ಏನೋ ಆಗಿದೆ ಅಂತ ಅನಿಸ್ತು , ಹೌದು ಯಾಕೆ ಅಂಗೆ ಅಂದ್ರು ನಾನು ಹೊಟ್ಟೆಲಿ ಇದ್ದಾಗ ನಮ್ಮ ಅಜ್ಜಿ ಅಂದ್ರೆ ಅದೇ ನಮ್ಮ ಅಪ್ಪನ ಅಮ್ಮ , ನನಮ್ಮನ ಅನಿಷ್ಟದವಳು ಕಾಲ್ಗುಣ ಸರಿಯಿಲ್ಲ ಅಂದ್ರು.

ನಾನು ಹೊಟ್ಟೆಲಿ ಇದೀನಿ ಅಂತ ಗೊತ್ತಾದ ಮರುದಿನ ದೇವಕೆ ಅಂದ್ರು ಹೌದು ನಾನು ಮಾರಿನ, ಯಾಕೊ ಒಂಥರಾ ನೋವು ಕಣ್ಣಲ್ಲಿ ನೀರು ಬಂದಂಗೆ ಆಯಿತು ಇದೇನಾ ದುಃಖ ಅಂದ್ರೆ ನಾನು ಬದುಕ್ತಿನೊ ಇಲ್ಲವೋ ಗೊತ್ತಿಲ್ಲ, ಆದ್ರೆ ಡಾಕ್ಟರ್ ಈ ರೀತಿ ಕೇಸ್ ಒಂದು ಮೊದಲೆ ದಾಖಲಾಗಿದೆ, ಅದ್ರೆ ಅಲ್ಲಿ ಮಗು ಚಿಕಿತ್ಸೆಗೆ ಪ್ರತಿಕ್ರಿಯಿಸಿ ಗುಣಮುಖವಾಗಿದೆ ಅಂತೆ,

ನಾನು ಗುಣಮುಖವಾಗಬೇಕು ದಯವಿಟ್ಟು ಎಲ್ಲರೂ ದೇವರಿಗೆ ಹೇಳಿ, ನಾನು ಹುಷಾರ್ ಆಗಬೇಕು.ಅಂತ ಪ್ಲೀಸ್ ಹೇಳಿ ಮರಿಬೇಡಿ.

ನಾಮಮಾತ್ರಕ್ಕೆ
ಜಗದೀಶ್ ಜಾಗ್ವಾರ್

ಯಾರು ನೀನು ?

       ಯಾರು ನೀನು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಮೊದ ಮೊದಲು ಹುಚ್ಚರ ಕೆಲಸ ಎನಿಸಿದರೂ, ಪದೇ ಪದೇ ಕೇಳಿದಾಗ ಪ್ರಶ್ನೆಯ ಅಂತರಾಳಕ್ಕೆ ಇಳಿದಾಗ ಉತ್ತರದ ಹಾದಿಯಲ್ಲಿ ನನಗೆ ಗೊತ್ತಿಲ್ಲದ ನಾನು ಸಿಗುತ್ತೇನೆ.

ಯಾರು ನೀನು ? ಸೋ ಕಾಲ್ಡ್ ಅಪ್ಪನ ಮಗ,   ಏ ಅದಲ್ಲ
ಯಾರು ನೀನು ? ನಾನುಇಂತಹ ಹೆಸರಿನವನು, ಏ ಹುಚ್ಚ
ಯಾರು ನೀನು ? ನಾನು ನಾನು ಮಾನವ,  ಅ ಹಾ ಹಾ… ಅಹ.. ಹ.. ಹಾ… ಯಾರಪ್ಪ ನೀನು
ಯಾರು ನೀನು ? ನಾನು ಈಕೆ ಗಂಡ, ಇವರ ಅಪ್ಪ , ಇವರ ಸಹೋದರ,ಸಹೋದರಿ  ಯಾರು ನೀ ಎಂದು ತಿಳಿದಿರುವೆ ಅದು ನೀನಲ್ಲ.

      ನೀನು ತಿಳಿಯಬೇಕಿರುವುದು ಯಾರು ನೀನು, ಇನ್ನೋಬ್ಬರ ಖುಷಿಯಲ್ಲಿ ಇರುವವನ ನೀನು, ಇಲ್ಲ ಇನ್ನೋಬ್ಬರಲ್ಲಿ ಖುಷಿತರುವವನ, ಯಾರು ನೀನು ನಿನ್ನ ವೀರ್ಯದಿಂದ ಹುಟ್ಟಿದ ಜೀವದಲ್ಲಿ ಇರುವವನು ನೀನಾ….?  ನೀನು ಇದು ಯಾವುದು ಅಲ್ಲ. ಅನ್ನುವುದು ನೀನಾ ?

       ನೀನು ಆದಮ್ಯ , ಯೋಚನೆಗೆ ನಿಲುಕದ ಚೇತನ, ನೀನು ಎಲ್ಲಿಯು ನಿಮಿತ್ತವಲ್ಲ, ಯಾರಿಗೂ ಸಿಮೀತವಲ್ಲ, ಯಾವುದಕ್ಕೂ ನಿಯಮಿತವಲ್ಲ. ಎಲ್ಲೊರೂಳಗು ನೀನಿರುವೆ, ಎಲ್ಲಾದರಲ್ಲೂ ನೀನಿರುವೆ.

     ಓ ಚೇತನ ಹುಡುಕು ಎಲ್ಲಿರುವೆ , ಹೇಗಿರುವೆ , ನೀನೊಂದು ಶಕ್ತಿ, ನೀನೊಂದು ಶಾಂತಿ,ಜ್ಯೋತಿ,ಯುಕ್ತಿ,ಮುಕ್ತಿ,ದಾರಿಯ ದೀಪ್ತಿ.

   ನೀನು ಯಾರು ಹುಡುಕುತ್ತಾ ಹೊರಟಷ್ಟು ಮಾನವನಾಗುವೆ, ನಿಸ್ವಾರ್ಥ ನೀನು ಇನ್ನೋಬ್ಬರಲ್ಲಿ ಅರಳುವ ನಗು,

ಯಾರು ನೀನು  ?
       
      ಕನ್ನಡಿ ಮುಂದೆ ನಿಂತು ಈ ಪ್ರಶ್ನೆ ಕೇಳಿದಾಗ ಯಾವುದೊ ಕಾಣದ ಕತ್ತಲ ಪ್ರಪಾತಕ್ಕೆ ಕಾಣದ ಕೈಗಳು ಹಿಂದಿನಿಂದ ತಳ್ಳಿರುತ್ತವೆ. ಮನಸ್ಸು ಮೆದುಳು ಯಾರೆಂದು ತಿಳಿಯಲು ಹೆದರುತ್ತಾದೆ ಸತ್ಯ ಕಹಿ ಮೆದುಳು ತಾನು ಯಾರೆಂಬುದು, ತನಗೆ ಬೇಕಿಲ್ಲ.

ಅದೇ ಜೀವನದಲ್ಲಿ ಎಲ್ಲಾ ಮುಗಿದು ಸಾವಿನ ದಿನಗಳು ಎಣಿಸುವಾಗ ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಎಲ್ಲಾವು ನಶ್ವರವೆಂದು ಕಣ್ಣೀರಾಕಿದರೆ ಏನೂ ಬಂತು.

ನೀನೆಂಬುದು ನೀನಾಲ್ಲ, ನಾನೆಂಬುದನ್ನೆ ನೀನು ಎಂದು ಕೊಂಡಿದೆ ಪ್ರಪಂಚ ನೀನು ಯಾರೆಂದು ನೀನೆ ಯೋಚಿಸು.

ನಾಮಮಾತ್ರಕ್ಕೆ
ಜಗದೀಶ್ ಜಾಗ್ವಾರ್

ಕನಸಿನಲ್ಲಿ ಕಂಡ ಕಥೆಗಳು-2

      ಗೆಳೆಯರೆಲ್ಲ ಕೂತು ಓದಿಕೊಳ್ಳುತ್ತಿದ್ದೇವು ಹುಡುಗರು ಹಾಗೂ ಹುಡುಗಿಯರು ಎಂಬ ವೇದ ಭಾವ ಇಲ್ಲದೆ ಎಲ್ಲಾ ಎಲ್ಲೆಗಳನ್ನು ಮೀರಿ ಸ್ನೇಹಪರ್ವ ಬೆಳೆದಿತ್ತು.

      ಇಗೆ ನಾವು ಅಧ್ಯಾಯನದಲ್ಲಿ ತಲ್ಲಿನರಾದಗ ಆಚಾನಕ್ಆಗಿ ಒಂದು ಪುಂಡರ ಗುಂಪು ಹೋಳಿಯ ದಿನವಾದ ಕಾರಣ ನಮ್ಮ ಮೇಲೆ ಹೋಳಿ ಹಾಕಲು ಮುಂದಾಗಿತ್ತು ಅವರು ನಮ್ಮ ಅನುಮತಿ ಇಲ್ಲದೆ ಬಲವಂತವಾಗಿ ವರ್ತಿಸಿ ಹೋಳಿ ಹಾಕಿದ್ದರು,  ಇದರಿಂದ ಮೊದಲೆ ಮೂಗಿನ ತುದೀಲಿ ಕೋಪ ಇದ್ದ ನಾನು ತಡೆಯಲಾಗದೆ ಅಲ್ಲೆ ಇದ್ದ ಕೊಡಲಿ ಇಡಿದು ಆ ವ್ಯಕ್ತಿಯ ಹುಡುಕಿ ಹೋರಟೆ ನಂತರ ತಿಳಿದದ್ದು ಆ ವ್ಯಕ್ತಿ ದೊಡ್ಡ ಬಾರ್ನಓನರ್ , ಲೋಕಸಭಾ ಸದಸ್ಯನೆಂದು ನಂತರ ಅವನನ್ನು ಹುಡುಕದ ಜಾಗವಿಲ್ಲ ಬಾರೀನ ಮೂಲೆ ಮೂಲೆ ಹಸಿದ ಚಿರತೆಯಂತೆ ಹುಡುಕಿದೆ , ಓಡಿದೆ , ಓಡಿ ಹುಡುಕಿ ಆಯಾಸ, ಉರಿಬಿಸಿಲು ಬಟ್ಟೆಗೆ ಬೇವರಿಂದ ಅಲಂಕಾರ. ಕ್ಯಾಂಪಸ್ ಗೆ ಬಂದಾಗ ತಿಳಿದದ್ದು,

ನಾನು ಹೋದ ಕೊಡಲೆ ನನ್ನ ಹುಡುಕುತ್ತಾ ಕ್ಯಾಂಪಸ್ಗೆ ಬಂದಿದ್ದ ಅವನ ಇಂದೆಯೆ ಪೋಲಿಸ್ ಅನುಸರಿಸಿ ಅವನನ್ನು ಬಂಧಿಸಿ ಕರೆದೊಯ್ದರು ಎಂದು ,  

ಯಾಕೆ ಎಂದು ಕೇಳಿದಾಗ ರೋಮಾಂಚನವಾಯಿತು,  ಆವನು ಮಾನವನಲ್ಲ ದಾನವ ನರರಾಕ್ಷಸ ಮದುವೆಯಾದ ಮೊದಲರಾತ್ರಿಯೆ ಹೆಂಡತಿಯ ಮಾಂಸ ನಾಜೂಕಾಗಿದೆ ಎಂದು ಲೈಂಗಿಕ ತುಷೆ ತೀರಿದ ಮೇಲೆ ಆಕೆಯ ಮಾಂಸದಲ್ಲಿ ಬಿರಿಯಾನಿ ಮಾಡಿ ನೆಂಟರಿಗೆಲ್ಲ ಔತಣಕೂಟ ಕೊಟ್ಟಿದ್ದ. ಅವನ ಗೆಳೆಯರನ್ನು ಶತ್ರುಗಳನ್ನು ಪಾರ್ಟಿ ನೇಪದಲ್ಲಿ ಚೆನ್ನಾಗಿ ತಿನ್ನಿಸಿ ಕುಡಿಸಿ , ಕುಡಿದ ಮತ್ತಲ್ಲಿ ಅವರನ್ನು ಹಾಗೆ ಮಾತಿನ ಮಾಯೆಯಲ್ಲಿ ಕತ್ತನ್ನು ಇಡಿದು ಚಾಕುವಿನಿಂದ ಗರ,ಗರಾನೆ ಚರ್ಮದ ಪದರಗಳ ದಾಟಿ ಚಾಕು ದೇಹದ ಒಳನುಗ್ಗಲು ರಕ್ತ ಬೋರ್ ನಿರಿನಂತೆ ಚಿಮ್ಮಿ  ತೋಡೆ ಪೊರ್ತಿ ಹರಡಿ ಸಾಯುವ ವ್ಯಕ್ತಿಯ ಸೊಂಟದವರೆಗು ರಕ್ತ ಅಭಿಷೇಕವಾಗಿತ್ತು.

ಅವನ ಕ್ರೌರ್ಯ ನೋಡಲಾಗದೆ ಕಣ್ಣು ತೆಗೆಯಲು ಕೊಠಡಿ ಶೇಕೆಯಿಂದ ತುಂಬಿತ್ತು, ಫ್ಯಾನ್ ಅನ್ ಮಾಡಿದಾಗ ತಿಳಿದಿದ್ದು ಕನಸೆಂದು, ಓ ಬೆಳ್ಳಂಬೆಳಿಗ್ಗೆ ಎಂತ ಕನಸು ಎನ್ನುತ ಕೊತೆ.

ನಾಮಮಾತ್ರಕ್ಕೆ ಜಗದೀಶ್ ಜಾಗ್ವಾರ್

ಕನಸಿನಲ್ಲಿ ಕಂಡ ಕಥೆಗಳು – 1

ಅಂದು ಯಾಕೋ ಮನಸ್ಸು ತನ್ನ ಯೌವನದಲ್ಲಿ ನಡೆದು ಬಂದ ಹಾದಿಯನ್ನುನೋಡಲು ಇಚ್ಛಿಸುತಿತ್ತು ಆಗಾಗಿ , ನಮ್ಮ ಕನಕಪುರದ ರಸ್ತೆ ಎಂದೆ ಪ್ರಸಿದ್ಧಿಯಾಗಿರುವ ರಾಷ್ಟ್ರೀಯ ಹೆದ್ದಾರಿಯ ಕೊನೆಯ ನೋಡುವ ಆಸೆ ಬಂತು ಹೀಗೆ ನಮ್ಮ ಯಲಚೇನಹಳ್ಳಿ ಬಿಟ್ಟು ಬಸ್ ಹತ್ತಿದೆ ಇಗೆ ಮಧ್ಯೆ ತಲಘಟ್ಟಪುರ ಬಂತು ಅಲ್ಲಿ ಒಬ್ಬರ ಮನೆ ಜ್ಞಾಪಕ ಬಂದು ಇಳಿಯೋಣವೆಂದು ಮುಂದಾದಗ ಬಸ್ ಹತ್ತಿದಾಗಿಂದ ತುಂಟ ಮಾತುಗಳಾಡುತಿದ್ದ ಪುಟ್ಟ ಪೋರಿಯೊಂದು ಏ ಅನ್ಕಲ್ ಇಳಿಬೇಡಿ ಪ್ಲೀಸ್ ಇಳಿಬೇಡಿ, ಎಂದು ನನಗೆ ಆಜ್ಞೆಮಾಡಿತು ನಂತರ ತನ್ನ ಅಮ್ಮನಿಗೆ ಅಂಕಲ್ಗೆ ಗೆ ಹೇಳು ಇಳಿಬೇಡ ಅಂತ, ಅಂಕಲ್ ನಮ್ಮ ಜೊತೆ ಬರ್ತಾರಲ್ಲ ಅಂತ ಹೇಳ್ತು.

ನಾನು ಆದನೆಲ್ಲ ಕೇಳ್ತಾ ನಗ್ತಾನೆ ಸರಿ ಸರಿ ಬರ್ತಿನಿ ಎಂದು ಹೇಳಿ ಇಳಿದು ಹೊರಟೆ, ಕಾರಣ ನಾನು ಒಂದು ಮನೆಗೆ ಅಲ್ಲಿ ನನ್ನ ಬಾಲ್ಯದಲ್ಲಿ ಪೇಪರ್ ಆಕ್ತಾ ಇದ್ದೆ ಅವರು ತುಂಬಾ ಸಭ್ಯ ಜನರಿದ್ದರು ಅಪ್ಪ ಮಗಳು ಮಾತ್ರ ಮನೆಯಲ್ಲಿ ಇದ್ದಾದ್ದು ಮಗಳ ವಿಧ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು ಹೇಳಿ ಕೇಳಿ ನಮ್ಮ ಜಾತಿಯವರು ಶಿಸ್ತಿನ ಸ್ನಾನ ಲಿಂಗಪೂಜೆ ಹಾಗೂ ಅವರಿಗು ನನ್ನ ಮೇಲೆ ನಮ್ಮ ಹುಡುಗ ಎಂಬ ಆಸೆ ಆಗಾಗ ಕರೆದು ಕಾಫೀ,ಟೀ ಕೋಡುತಿದ್ದರು ಮಗಳು ಅಪ್ಸರೆಯಂತೆ ಇದ್ದಳು ಸಭ್ಯರಾದ ಕಾರಣ ನನ್ನ ಕೋತಿಚೇಷ್ಟೆ ಮಾಡದೆ ಸುಮ್ಮನಿದ್ದೆ , ಇಂದು ಅದೇ ಮನೆಗೆ ಹೋಗಿ ನೋಡಲಾಗಿ ಬಿಲ್ಡಿಂಗ್ ಲ್ಲಿ ಬದಲಾವಣೆಯಾಗಿತ್ತು ಅಂದು ಪ್ಲೋರ್ ಬೈ ಪ್ಲೋರ್ ಇದ್ದಾ ಮನೆ ಇಂದು ಇಂಡಿಪೆಂಡೆಂಟ್ ಮನೆ ಆಗಿತ್ತು ಹೋಗಿ ಮನೆಯ ಬಿಲ್ ರಿಂಗ್ನಿಸಿದಾಗ ಅಲ್ಲಿ ಅವರ ಬದಲು ದಂಪತಿಗಳು ಇದ್ದರು ತಾನು ಬಂದ ಕಾರಣ ತಿಳಿಸಿದಾಗ ಅವರಿಂದ ಬಂದ ಉತ್ತರ ಮಗಳು ಮದುವೆಮುನ್ನ ಗರ್ಭಿಣಿಯಾದ ಕಾರಣ ತಂದೆ ಅವಮಾನ ತಾಳಲಾಗದೆ ಇಬ್ಬರು ವಿಷ ಕುಡಿದು ಸತ್ತರು ಎಂದು ಕೇಳಿ ತುಂಬಾ ನೋವಾಯಿತು.

ನಂತರ ಇವರು ನಮ್ಮ ಜಾತಿಎಂದು ತಿಳಿದು ಸಂತೋಷವಾಗಿ ಅವರು ನನ್ನನ್ನು ಅದೇ ರೀತಿಯಲ್ಲಿ ಅತಿಥಿ ಸತ್ಕಾರ ಕೊಟ್ಟು ಕಳಿಸಿದರು. ಅದೇ ದಾರಿಯಲ್ಲಿ ಬಂದು ಪೆಟ್ಟಿ ಅಂಗಡಿಯಲ್ಲಿ ಸಿಗರೇಟ್ ತೆಗೊಳ್ಳಲು ಹೋದಾಗ ಅಲ್ಲಿ ವೀಡ್ ಹಾಗೂ ಸಿಗರ್ ನೋಡಿ ಬಾಯಲ್ಲಿ ನೀರು ಬಂತು ಆದರ ಹಣ ಕೇಳಿ ಗೂಗಲ್ ಪೇ ಇದೆಯ ಎಂದು ವಿಚಾರಿಸಿದಾಗ ಇಲ್ಲ ಎಂದು ತಿಳಿಸಿದರು ಆದರೆ ತನ್ನ ಮುಂದೆಯೆ ನಿಂತಿದ್ದ ವ್ಯಕ್ಯಿಯ ಬಳಿ ಗೂಗಲ್ ಪೇ ಇತ್ತು ಅವನಿಗೆ ದುಡ್ಡು ಕಳಿಸಿ ಕ್ಯಾಶ್ ಪಡಿಯೋಣವೆಂದು ಯೋಚಿಸಿ ಜೇಬಿಗೆ ಕೈ ಹಾಕಿದಾಗ ಅಲ್ಲಿ ಆಶ್ಚರ್ಯ,  ಕಾರಣ ಮೊಬೈಲ್ ಕಾಣೆಯಾಗಿತ್ತು , ಈ ಆಸಾಮಿ ಬೇರೆ ಅವಸರದಲ್ಲಿಇದ್ದ.

ಜ್ಞಾಪಕ ಬಂದು ಅವರ ಮನೆಗೆ ಹೋಡಿದೆ ಬಾಗಿಲಾಕಿದ್ದ ಕಾರಣ ತರಾತುರಿಯಲ್ಲಿ ಎರಡನೇ ಮಹಡಿ ಬಾಲ್ಕನಿ ಬಾಗಿಲಿನಿಂದ ಹೊಳ ಹೋದಾಗ , ಇಬ್ಬರು ದಂಪತಿಗಳು ಬೆಚ್ಚಿದ್ದರು ಅವರನ್ನು ತಣ್ಣಾಗಾಗಿಸಿ ಈ ಬಾರಿ ಮೊಬೈಲ್ ತಗೊಂಡೆ ಆದರೆ ಅದು ಅಲ್ಲೆ ಇತ್ತು.

ಎರಡನೇ ಬಾರಿ ಟೇರೆಸ್ ಬಾಗಿಲು ತೆರೆದದ್ದು ಅಲ್ಲಿಂದ ಧುಮುಕಿದಾಗ ಮೆಟ್ಟಿಲು ಇಳಿಯುವಾಗ ಎರಡನೇ ಮಹಡಿಯಲ್ಲಿ ಮಗಳ ಅಪ್ಪನ ಧ್ವನಿ ಕೇಳಿಸಿತು ನನ್ನ ನೋಡಿದ ಅವರಿಬ್ಬರು ಶ್ರೀಧರ್,ಶ್ರೀಧರ್,ಶ್ರೀ‌ಧರ್ ನಿಲ್ಲೊ ನಿಲ್ಲೊ ಎಂದರು, ಭಯಭೀತನಾಗಿ  ನೆಲ ಮಹಡಿಗೆ ಹೋಗಿ ಮೊಬೈಲ್ ತಗೋಬೇಕಾದಗ, ನನ್ನ ರೀತಿಯೆ ದಂಪತಿಗಳು‌. ರೂಂ ನಿಂದ ಅವನ ಹೆಂಡತಿ ಶಬ್ದ ಕೇಳಿ,  ಮೆಲ್ಲಗೆ ಬಾಗಿಲು ತೆಗೆಯಲು ಮೆಟ್ಟಿಲಿನಿಂದ ಆಗಾತನೆ ಇಳಿದು ನೆಲಕ್ಕೆ ಬಿದ್ದಿದ್ದ ನಾನು ಆಕೆಯ ಕಾಲು ಮುಟ್ಟಿದೆ ತಕ್ಷಣ ಹೆದರಿ ನೀರಾಳದಳು ಅಲ್ಲಿಂದ ಮೊಬೈಲ್ ತಗೊಂಡು.

ಸರ್ ಮೊದಲು ಮನೆಕಾಲಿಮಾಡಿ ಎಂದು ಕಿರುಚುತ್ತಾ ನಾನು ಮನೆಯ ಹೊರಬಿದ್ದೆ.

ಅಲ್ಲಿಗೆ ಸಡನ್ ಹಾಗೆ ನಿದ್ದೆಯಿಂದ ಎದ್ದಾಗ ಸಮಯ ಸಂಖ್ಯೆ 4:30 , ಮೇಟ್ರೊ ಶಬ್ದ ಕೊರೊನ ಎಫೆಕ್ಟ್ ಎರೀಯ ಪೂರ್ತಿ ಸ್ಮಶಾನ ಮೌನ, ಕನಸೆಂದು ತಿಳಿದು ನೆಮ್ಮದಿಯಾಗಿ, ಈ ಅನುಭವ ಬರಹಕ್ಕೆ ಇಳಿಸೋಣವೆಂದು ಕೊತೆ.

ಜಗದೀಶ್ ಜಾಗ್ವಾರ್

ಅವಳಿಗೊಬ್ಬ ಇವನು

ಅವಳಲ್ಲಿನೊ ಇದೆ
ಅದು ಇವನಿಗೆ ಕಂಡಿತು
ಇವನಲ್ಲಿನೊ ಇದೆ
ಅದು ಅವಳಿಗೆ ಕಂಡಿತು…..

ಒಂದು ನೋಟ
ಎರಡು ಕಣ್ಣು
ಮೂರರಲ್ಲಿ ಮನಸ್ಸಿನ ಮಿಲನ….

ಕೊರೆಯುವ ಚಳಿಯ
ಗಾಡ ರಾತ್ರಿಯ ಹೊತ್ತು
ಕನಸಿನಲ್ಲಿ ಅವನದೆ ಕಸೂತಿ
ಇನ್ನು ಇವನು ನಿದ್ರೆ ಇಲ್ಲದೆ ತೊಳಲಾಟ…..

ಪ್ರೇಮ ಗೀತೆಗಳೆ ಹಿತವಚನ
ಲವ್ ಸಿನಿಮಾಗಳೆ ಸುಭಾಷಿತ
ಹೀರೋ ಇವನದರೆ
ಅಲ್ಲಿ ಹಿರೋಯಿನ್ ಅವಳೆ…..

ಏನೇನೊ ಆಸೆ,ಕನಸಿದ್ದರು
ಮುಖ ನೋಡಿ ಮಾತನಾಡಲು
ಅರೆಯದ ಅಲೆಗಳ
ಬೆಳದಿಂಗಳ ಆಟ…..

ಎಲ್ಲೋ ಹತಾಶೆಯಲ್ಲಿರುವ
ಅವಳಿಗೆ ಇವನೆ ಅಮೃತ
ಇವನ ಬರಡು ಭೂಮಿಗೆ
ಅವಳೆ ಮುಂಗಾರು….

ಕಾಮದ ಹಂಗಿಲ್ಲದೆ
ದೇಹದ ದಾಹವಿಲ್ಲದೆ
ಇಬ್ಬರ ಸಂತಸದಲ್ಲಿ
ಅರಳಿದ ನಿರ್ಮಲ ಕೆಂಪು ಗುಲಾಬಿ

ಏನೆಂದು ಹೆಸರಿಡಲಿ…….?
ಅರೆಯದ ಪ್ರೇಮವೇ…….?
ಆಕರ್ಷಣೆಯ ಆಮಲೆ…….?
ಬಿಸಿ ಯೌವನದ ಭಾವನೆಯೇ…….?

ಜಗದೀಶ್ ಜಾಗ್ವಾರ್

ಕಳ್ಳಿ-ಹೂ

ಕೆಲವರು ನನ್ನ ಮೈಮಾಟ ಕಂಡರು
ಇನ್ನು ಕೆಲವರು ನನ್ನ
ಕಣ್ಣುಗಳ ಕೊಂಡಾಡಿದರು ಆದರೆ
ನನ್ನ ಮೌನ ಅರಿತವನು ಅವನೊಬ್ಬನೇ….

ಹರೆಯದ ಅವಸರದಲ್ಲಿ
ಹಾಸಿಗೆಯ ಕಾವು ಬಯಸಿದವರೆ
ಹೆಚ್ಚು, ಆದರೆ ಅವನು ಮಾತ್ರ
ನನ್ನ ತಿಳಿಯಲು ಬಯಸಿದ….

ಬೆತ್ತಲೆ ಜಗತ್ತಿನಲ್ಲಿ
ನಗ್ನ ದೇವತೆಯಾದ
ನನಗೆ
ವಸ್ತ್ರ ಉಡಿಸಲು ಬಂದವನು….

ಕತ್ತಲೆ ಜಗತ್ತಿನಲ್ಲಿ ಕಣ್ಮರೆಯಾದ
ನನಗೆ, ಕೆಂಪುನಗರದಿಂದ
ವಿಮುಕ್ತಿ ಕೊಡಲು ಬಂದಿರೊ
ಬಾಂಧವ ಇನಿಯಾ..‌‌..

ಇದೆಲ್ಲ ಎಲ್ಲಿಗೆ , ಎಂದು
ನನ್ನ ಹಣ್ಣಾದ ಮೊಲೆಗಳಿಗು
ಅವನ ನೆರೆತ ಎದೆಯ ಕೊದಲಿಗು
ಸಾಗರಗಳ ದಾಟಿದ ಪ್ರೀತಿ ತಿಳಿದೀತೆ..‌..

ಪ್ರೀತಿಗೆ ವಯಸ್ಸಿಲ್ಲವಾದರು
ದೇಹಕ್ಕೆ ಇದೆ ಎಂಬ ಅರಿವಿದೆ
ದಡಕ್ಕೆ ಬಂದಮೇಲೆ ದಣಿವಾದರೆ
ದೇಹದ ತಪ್ಪೇ….

ಜಗದೀಶ್ ಜಾಗ್ವಾರ್

ಶಿವಕುಮಾರ

ಇವನೊಂತರ, ಇವನು
ಒಂದು-ತರ, ಯಾಕೆಂದು
ಉತ್ತರವಿಲ್ಲ, ಇವನು
ನಮ್ಮಂತೆ ಅಲ್ಲ.‌‌…

ದಿನಕ್ಕೆ ಎರಡು ಬಾರಿ
ಮಾತ್ರೆ ನುಂಗುವ, ಯಾವಗಲೂ
ಕಲ್ಪನೆಯಲ್ಲಿ ಇರುವ
ಇವನು ಒಂಥರಾ….

ಎಲ್ಲರೊಡನೆ ಬೇರೆಯುವ
ನಗು ನಗುತ್ತಾ ಮಾತನಾಡುವ
ಮಂದ ಬುದ್ಧಿಯಾದರೂ
ಅಕ್ಷರಸ್ಥ….

ಮೋಸ, ಕಪಟ,ದ್ರೋಹ
ತಿಳಿಯದವ ಆದರೆ
ಹುಟ್ಟು ಸೊಂಬೆರಿ
ಸಿದ್ಧ….

ಸಿಂಗಾನಲ್ಲೂರಿನ ಸೊಂಬೆರಿ
ಸಿದ್ಧ, ಎಲ್ಲಾ ತಿಳಿದು
ಮೈ ಬಗ್ಗಿಸಿ ದುಡಿಯಲು
ಮಖ ತಿರುಗಿಸುವ

ಇವನೇ ನಮ್ಮ ಶಿವಕುಮಾರ….

ಅವಳ ಕೇಶರಾಶಿ

ಕೂದಲು ಹಾರಾಡಿದ ಬೆನ್ನು
ನೋಡುವುದೆ ಅಂದ,
ಇನ್ನು ಅವುಗಳನ್ನು ನನ್ನ ಮೊಗದಿಂದ
ಸೊಕಿಸಿ ಬಿಡುವೆ ಒಮ್ಮೆ ಗೆಳತಿ….

ಮುಂಜಾನೆ ಎದ್ದು ಪಕ್ಕದಲ್ಲಿ
ನೋಡಲು ನೀನಿಲ್ಲ ಜಳಕದ
ಕೋಣೆಯಿಂದ ನಿ ಬಂದು ಕೂದಲು
ನನ್ನ ಮೊಗಕ್ಕೆ ಸೊಕಿಸಲು ಏನೆಂದು ಹೇಳಲಿ ಗೆಳತಿ….ನಾನಗಾಗಿ ನೀ ಬಿಸಿ ನೀರು
ಕಾಯಿಸಿ, ಬೆನ್ನ ನೇವರಿಸಲು
ಮಂಜಿನ ಮುಂಜಾನೆ
ಮೋಹಕವಾಗಿತ್ತು….

ನಿನ್ನಂದವೆ ನಿನ್ನ ಆ, ಕೇಶರಾಶಿ
ರೇಷ್ಮೆಮೆಯೆ ನಾಚುವಂತ ಮೃದು,
ನಿನ್ನ ಮೃದುಲ ಕೇಶವ ಸೋಕಿಸಿ
ಕಾಮನ ಬಿಲ್ಲಿನ ಕಾಡಿಗೆಗೆ
ಹದರದಿ ಚುಂಬಿಸಲೆ….

ನೀನಿಲ್ಲದೆ ಏನಿಲ್ಲ
ಸೃಷ್ಟಿಯು ನೀನು,ಸರ್ವಾವು ನೀನು
ನಿನ್ನ ಮಡಿಲ ಕೊಡುವೆಯ
ನಿನ್ನ ಪ್ರೀತಿಯ ಸಾಗರವ ನಾನಗಾಗಿ ಮುಡಿಪು ಇಡುವೆಯ….

ಜಗದೀಶ್ ಜಾಗ್ವಾರ್

ಬೃಹನ್ನಳೆ

ಗಂಡೆಂದರು ಗಂಡೆಂದರು
ಜನಿಸಿದಗ ಗಂಡೆಂದರು
ಬಾಳಿದೆ ಗಂಡಂತೆ
ಬದುಕಿದೆ ಗಂಡಂತೆ
ಬರುಬರುತ ಆಸೆಯಾಯಿತು
ಹೆಣ್ಣಾಗುವಂತೆ….

ಚೌರಿಕೆ ಮಾಡಿಸಲಿಲ್ಲ
ಉಗುರಿಗೆ ಬಣ್ಣ
ಮಾಡುವುದು ಶುರುವಾಯಿತಲ್ಲ
ಕಾಲುಂಗುರ ಬೇಕಿನೆಸಿತು
ಕೈ ಬಳೆ ಕರೆದವು
ಕಾಲು ಗೆಜ್ಜೆ ಕುಣಿದವು
ಉಡುವು ಸಂಪೂರ್ಣ
ಬದಲಾಯಿತು.‌‌…

ಮನೆಯಲ್ಲಿ, ತೊರೆದರು ಎಲ್ಲ
ಅಪ್ಪ ಹೊಡೆದ, ಅಮ್ಮ ಅತ್ತಳು
ಸಹೋದರ,
ಸಹೋದರಿಯರು,
ಅಸಹ್ಯ ಪಟ್ಟರು
ಇನ್ನೆಲ್ಲಿ
ಮನೆಯಲ್ಲಿ,
ಜಾಗ….

ದೈಹಿಕವಾಗಿ ಹೆಣ್ಣದೆ
ದೈನಂದಿನ ಬದುಕಿನಲ್ಲಿ
ನಾಯಿಯಾದೆ
ಸಮಾಜ
ಸೆರಗಾಸುವರಿಗಿಂತ ಕಡೆಯಾಗಿ
ನೋಡಿತು….

ನನ್ನ ರೀತಿಗೆ ಯಾರು ಕಾರಣ ?
ಯಾರು ಹೊಣೆಗಾರ ?
ತಿಳಿಯಲಿಲ್ಲ ದೇವರೆಂದು ಯಾರೊ
ಇರುವನಂತೆ ಹುಡುಕುತ್ತಿರುವೆ ಸಿಕ್ಕರೆ
ತಿಳಿಸಿ….

ಅಸಹ್ಯ ನಾವಲ್ಲ,
ಅದ ನುಡಿಯುವ ನಿನ್ನ ಬಾಯಿ,
ಆತ್ಮ ಗೌರವದಿಂದ ಬದುಕುವ ಆಸೆ,
ನಮಗೊಂದು ಕೆಲಸ ಕೊಡಿ,
ನಮಗೊಂದು ಕೆಲಸ ಕೊಡಿ,
ನಮಗೂ ಹೊಟ್ಟೆ ಇದೆ
ಸಮಾಜದಲ್ಲಿ ಒಳ್ಳೆ ಸ್ಥಾನ ಮಾನ
ಕೊಡಿ….

ಜಗದೀಶ್ ಜಾಗ್ವಾರ್