ಕಾಡಿನಲ್ಲಿ ಸಿಂಹಗಳು ಮಾಡಿದ್ದೆಲ್ಲ ಸರಿಯಿಲ್ಲ

ಅಲ್ಲೊಂದು ಸುಂದರ ಕಾಡು, ಕಾಡಿನಲ್ಲಿ ಸಿಂಹಗಳದ್ದೇ ದರ್ಬಾರು ಕಾಡಿನ ರಾಜ ಸಿಂಹ ಎಲ್ಲರೂ, ಇಡೀ ಕಾಡಿನ ಪ್ರಜೆಗಳು ಸಿಂಹವನ್ನು ತಮ್ಮ ನಾಯಕನೆಂದು ಭಾವಿಸಿದ್ದವು ಹಾಗೂ ಅವುಗಳನ್ನು ನಂಬಿ ಬಹುಮತ ಕೊಟ್ಟು ಪ್ರತಿ ಬಾರಿಯ ಕಾಡಿನ ಚುನಾವಣೆಯಲ್ಲಿ ಸಿಂಹವನ್ನು ಗೆಲ್ಲಿಸುತ್ತಿದ್ದವು. ಸಿಂಹವು ಅದಕ್ಕೆ ತಕ್ಕಂತೆ ಕಾಡಿನ ಉಳಿದ ಪ್ರಾಣಿಗಳಾದ ನರಿ,ಜಿಂಕೆ, ಕರಡಿ, ಚಿರತೆ,ಹುಲಿ,ಇರುವೆ,ತೋಳ,ಹದ್ದು,ಗೂಬೆ,ಕುರಿ,ಆಮೆ ಎಲ್ಲಾರನ್ನು ಕೇಸರಿ ಆಸಕ್ತಿಯಿಂದ ನೋಡಿಕೊಳ್ಳುತಿತ್ತು,

ಪ್ರತಿ ಬಾರಿಯೂ ಕಣ್ಣು ಕಟ್ಟುವ ಹೊಸ, ಯೋಜನೆಗಳನ್ನು ಸುಳ್ಳು ಆಶ್ವಾಸನೆಗಳು ಹಾಗೂ ಅಭಿವೃದ್ಧಿ ಜಪದ ಹಿಂದೆ ತನ್ನ ಪಕ್ಷದ ಹಿತಾಸಕ್ತಿ ಕಾಯುವುದನ್ನೆ ಕೆಲಸಮಾಡಿಕೊಂಡಿತ್ತು, ಇದರದ್ದು ತಪ್ಪಿಲ್ಲ ಕಾರಣ ಸಿಂಹಕ್ಕೆ ಸರಿಯಾದ ಪೈಪೋಟಿ ಕೊಡುವ ಕೊರತೆ, ಕಾಡಿನಲ್ಲಿ ಹೆಮ್ಮಾರವಾಗಿ ಕಾಣತೊಡಗಿತ್ತು ಕೋಡಂಗಿ ಪಕ್ಷ ಅವನತಿ ಹಾದಿ ಇಡಿದರೆ ಇತ್ತ ಕಮ್ಮುಗಳು ಕಣ್ಣುತೆರದಿರಲಿಲ್ಲ ಈ ನಡುವೆ ಕಾಡಿನ ಆಳ್ವಿಕೆ ಸಿಂಹಗಳ ಕೈಯಲ್ಲಿರುವುದರಿಂದ, ವಿರುದ್ಧ ಮಾತಾನಾಡಿದಲ್ಲಿ ಕಾಡಿನ ವಿರೋಧಿ ಎಂದು ಬೋನಿಗೆ ತಳ್ಳುತಿದ್ದವು.

ಇನ್ನು ಆಳ್ವಿಕೆ ಅಭಿವೃದ್ಧಿ ಹೆಸರಿನಲ್ಲಿ ಕಾಡು ತುಕ್ಕು ಇಡಿಯುತಿತ್ತು ಕಾಡಿನ ಬೆಳವಣಿಗೆ ಹಾಗೂ ಉತ್ಪನ್ನ ಇಳಿಯುತಿತ್ತು ಕಾರಣ ಕಾಡನ್ನು ಅಭಿವೃದ್ಧಿ ಮಾಡುತ್ತೆವೆ, ಎಲ್ಲೆಲ್ಲಿಯೂ ಸುಗಂಧ ಹರಡುವಂತೆ ಮಾಡುತ್ತೆವೆ, ಜಿಂಕೆ ಬಲಿ ತಪ್ಪಿಸುತ್ತೆವೆ, ಕುರಿಗಳ ರಕ್ಷಸುತ್ತೆವೆ ಎಂದೆಲ್ಲ ಹುಚ್ಚು ಆಶ್ವಾಸನೆ ಕೊಟ್ಟು,

ಸದ್ಯಕ್ಕೆ ಇರುವ ಮರಗಳನ್ನು ಕಡಿದು ಎಲ್ಲೆಲ್ಲಿಯೂ ಶ್ರೀ ಗಂಧ ಮರ ನೇಡೊಣ ಎಂದು ಹೇಳಿ ಇರುವ ಮರಗಳನ್ನು ಒಮ್ಮೆಲೇ ಅರ್ಧರಾತ್ರಿ ಕಡಿದು ರಾತ್ರೋರಾತ್ರಿ ಶ್ರೀಗಂಧ ಬೆಳೆಯುವ ಕನಸುಕಂಡು ತಾವೆ ತೋಡಿದ ತಮ್ಮದೇ ಪ್ರಪಾತಕ್ಕೆ ಸಿಂಹಗಳು ನೆಗೆದವು ಇತ್ತ ಕಾಡಿನಲ್ಲಿರುವ ಬೇರೆ ಪಕ್ಷ , ಸಂಘಟನೆಗಳು ಸಿಂಹಗಳ ಮೇಲೆ ಹರೆಹಯ್ದಾರು ಏನೂ ಕಿತ್ತುಕೊಳ್ಳಲಾಗಿದೆ, ಕೈ ಲಾಡೊ ಗೊಂಬೆಗಳಾದರೆ ಅತ್ತ ಕಾಡಿನ ಕುರಿಗಳು ಯಾರೂ ಸಮರ್ಥರು ಸಿಗದೆ ಸಾಕಾಗಿ.

ಗುರಿಯು ತಿಳಿಯದೆ ಹಾದಿಯು ತಿಳಿಯದೆ ಜೈ ಜೈ ಎಂದು ತಮ್ಮ ಕರ್ತವ್ಯದಂತೆ ನಟಿಸುತ್ತಿವೆ, ಕತ್ತಲಲ್ಲಿ ದಾರಿಕಾಣದೆ ರಾತ್ರಿ ಕಂಡ ಬಾವಿಗೆ ಹಗಲು ಸಮೂಹ ಸಮೇತ ಬಿದ್ದು ಅವನತಿ ಇಡಿದು ಕಾಡಿನ ಅಭಿವೃದ್ಧಿ ಕಳೆದುಹೋಗಿದೆ.

ಇನ್ನು ಕಾಡಿನ ಯುವಪ್ರಾಣಿಗಳು ಕೆಲಸವಿಲ್ಲದೆ ಇದ್ದಾರೆ, ಇನ್ನು ಕಾಡಿನ ಉದ್ಯಮಿಗಳು ಕಾಕ್ಕಬಿಕ್ಕಿಯಾಗಿದ್ದರೆ ಈ ನಡುವೆ ಕಮ್ಮುಗಳು ಕಾಡಿನಲ್ಲಿ ಸಿಂಹ ನಡೆಯ ವಿರುದ್ಧ ಹೋರಾಡಿದರೆ ,ಪ್ರಶ್ನೆಸಿದರೆ ಕಾಡಿನ ವಿರೋಧಿಗಳೆಂದು ಹಣೆಪಟ್ಟಿಕಟ್ಟಿ ಪ್ರಶ್ನೆ ಮಾಡಿದವರನ್ನೆಲ್ಲ ಬೊನಿಗೆ ಹಾಕಲಾಗುತ್ತಿದೆ.

ಕಾಡಿನಲ್ಲಿ ಎಲ್ಲಿದೆ ಸ್ವಾತಂತ್ರ್ಯ ಇನ್ನು ಕಾಡ ಕಾಯಲು ಪ್ರಕೃತಿ ದೇವಿ ಎಂದು ಕಾಳಿಯ ನರ್ತನ ತಾಳಿಯಳೊ ಗೊತ್ತಿಲ್ಲ, ಆದರೆ ಅ ಸಮಯ ದೂರವಿಲ್ಲ.

ಜಗದೀಶ್ ಜಾಗ್ವಾರ್

ಯಾರಿವಳು……..?

ಒಂದು ರೀತಿಯ ಬಿಸಿ ಅನುಭವ ಜ್ವಾಲಾಮುಖಿ ಮೇಲೆ ಮನಗಿದ್ದೇನೊ ಇಲ್ಲ ನೆಲದ ಮೇಲೊ ತಿಳಿಯುತ್ತಿಲ್ಲ, ಬಿಸಿ ಅನುಭವ ಮೈಯೆಲ್ಲಾ ಬೆಚ್ಚಗಾಗುತ್ತಿದೆ ಬೆವರುತ್ತಿದ್ದೆನೆ ಈ ನಡುವೆ ಸೊಳ್ಳೆಗಳು ಏನನ್ನೂ ಕೇಳದಿ ರಕ್ತ ಹಿರುತ್ತಿದ್ದವು, ಇಗೆ ಕಣ್ಣು ಮುಚ್ಚಿರುವಾಗ ಒಮ್ಮೆಲೇ ನನ್ನ ಬೆಂಗಳೂರು ಬದುಕು ಆ ವೈಭೊಗದ ಜೀವನ ಜ್ಞಾನಪಕಕ್ಕೆ ಬಂತು, ಏನನ್ನೂ ಮಾಡದೆ ಆರಾಮಾಗಿ ಇದ್ದ ಕಾಲವದು.

ಈ ಬ್ಯಾಚುಲರ್ ಜೀವನದ ಮಜಲುಗಳಿಗೆ ತೆರೆದು ಕೊಳ್ಳದ ನಾನು ರಾಜನಂತೆ ಇದ್ದೆ ಅಡಿಯಿಂದ ಮುಡಿಯವರೆಗೆ ನನ್ನ ಮಾತೆ ನಡೆಯುತ್ತಿತ್ತು ಆದರೆ ಯಾಕೊ ಈ ಹೊಸ ಹಾಸ್ಟೆಲ್ ಜೀವನ ನೋಡಿರದ ಇನ್ನಷ್ಟು ಮಾನವ ಹೊಸ ಮುಖಗಳ ಪರಿಚಯಿಸುತ್ತಿದೆ.

ಇಗೆ ಆಳವಾದ ಯೋಚನೆಯಲ್ಲಿ ಇರುವಾಗಲೆ, ಎಲ್ಲೊ ಅಮ್ಮ ಎಬ್ಬಿಸಿದಂತಾಗಿ ಏಳಲು ಮುಂತಾದಗ ಅಲ್ಲಿ ಯಾರು ಇರಲಿಲ್ಲ, ಎಷ್ಟಾದರೂ ಮಾನವ ಸಂಘಜೀವಿ ಒಬ್ಬನೆ ಎಲ್ಲಿಯವರೆಗೆ ಎಗಿಯಾನು ಎಂದು ನಕ್ಕು ಮತ್ತೆ ಹಸಿಗೆ ಇಡಿದೆ.

ಆದರೆ ನಿದ್ದೆ ಹಾರಿಹೋದ ಪರಿಣಾಮ ಕೆಲವೆ ಸೆಕೆಂಡುಗಳಲ್ಲಿ ಎದ್ದು ಕೂತು ಗಡಿಯಾರವ ದಿಟ್ಟಿಸಿದೆ ಏನೋ ಪಡೆಯುವ ಹಂಬಲ ಮತ್ತೇನೂ ಕಳೆದುಕೊಂಡ ನೋವು ಯಾಕೋ ತಲೆಸುತ್ತಿದ ರೀತಿಯಾಗಿ ದಿಂಬಿಗೆ ತಲೆ ಇಟ್ಟೆ ಈಗೆ ಒಂದಷ್ಟು ಪ್ರೀತಿಯ ಗೀತೆಗಳ ಮೊಬೈಲ್ ಗುನುಗಲು ಆಗೆ ಆಳೆ ಪ್ರೇಯಸಿ ರು ಹೊಂದಷ್ಟು ಹೊಸ ಕ್ರಶ್ ಗಳು ನೆನೆಯುತ್ತಾ ಮನಗಿದ್ದೆ, ಹಬ್ಬದ ರಜೆಯಾದ ಕಾರಣ ಗೆಳೆಯರು ಊರಿಗೆ ಹೋದರು ಯಾಕೊ ಊರಿಗೆ ಹೋಗಲು ಮನಸ್ಸಿಲ್ಲದೆ ಹಾಸ್ಟೆಲ್ ಗೋಡೆಗಳ ದಿಟ್ಟಿಸುತ್ತ ಬುದ್ಧನ ಮೂರ್ತಿಯ ದಿಟ್ಟಿಸಿ ನೋಡುತ್ತಾ ಕೂಳಿತ್ತಿರುತ್ತಿದ್ದೆ

ಇತ್ತ ಗೆಳೆಯತಿಯರು ಹಬ್ಬದಲ್ಲಿ ನಿರುತರಾದರೂ ಊರಿಗೆ ಬಿಟ್ಟ ಬಿದಿ ಬಸವನಂತೆ ಕ್ಯಾಂಪಸ್ ಹುಚ್ಚಾಪಟ್ಟೆ ಸುತ್ತಿ ಸುತ್ತಿ ಸಾಕಾಗಿ ಗ್ರಂಥಾಲಯದಿಂದ ತಂದ ಮಾರ್ಕ್ ಟುನ್ಗೆಟ್ಗೆ ಅವರ “ಮೀಡಿಯಾ ಮೋನಲತೀ ಸ್” ಪುಸ್ತಕ ತಿರುವಾಕುತ್ತ ಇಗೆ ಸಮಯ ಸಾಗಿತ್ತು ಇನ್ನೂ ರಾತ್ರಿಯಾದರೆ ಊಟಮುಗಿಸಿ ವಿವಿಯ ಬೆಳಕಿನ ಹಬ್ಭವ ನೋಡುವುದೆ ಖುಷಿ‌ ಹಾಗೂ ವಿವಿ ಮುಖ್ಯದ್ವಾರದ

ದೀಪಾಲಂಕಾರ ಹಾಗೂ ಕುವೆಂಪುರವರ ಹಸ್ಮನುಮುಖಿ ಮೊಗವ ನೋಡುವುದೆ ಅಂದ ಮಾನಸಗಂಗೋತ್ರಿಯ ಎಂಬ ಹಸಿರು ಮನೆಯ ಮಗುವಾಗಿ
ಬಿಡುತ್ತೆವೆ , ವಿವಿಯ ಕ್ಯಾಂಪಸ್ ಬಗ್ಗೆ ಹೇಳಲು ಮುಂದಾದರೆ ಎಲ್ಲೆಲ್ಲಿಯು ಹಸಿರು ಹುಲ್ಲುಗಳು ಹೂಗಳುಮತ್ತು ಮರಗಳು ಶಾಂತಿಗಾಗಿ ಬುದ್ಧ, ವಿದ್ಯೆಯ ಪ್ರತಿರೂಪವಾಗಿ ಅಂಬೇಡ್ಕರ್
ವಿಶ್ವಮಾನವ ಕುವೆಂಪು ಈಗೆ ದಿಗ್ಗಜರು ಗಂಗೋತ್ರಿಯ ಆವರಿಸಿರುವಾಗ.ಹೇಗೆ ಇದನ್ನು ಬಿಡಲು ಮನಸ್ಸಾದೀತು…

ಜಗದೀಶ್ ಜಾಗ್ವಾರ್

ಆಕಸ್ಮಿಕ ಪಯಣದ ಆಗಂತುಕ

ಎಂದಿನಂತೆ ಎಲ್ಲರೂ ತರಗತಿಯ ಗೆಳೆಯರ ಆಶಯದಂತೆ ಕೊನೆಯ ದಿನದ ಯುವಸಂಭ್ರಮಕ್ಕೆ ಸೇರುವುದು ಎಂದು ತೀರ್ಮಾನವಾಯಿತು ಎಲ್ಲರೂ ತಮ್ಮ ಮಾತಿನಂತೆ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿ ನಂತರ ಹುಡುಗರೆಲ್ಲ ಸೇರಿ ಚಿಕ್ಕದೊಂದು ಪಾರ್ಟಿ ಮಾಡೋಣವೆಂದು ಮಾತನಾಡುವಾಗ, ಆಕಸ್ಮಿಕವಾಗಿ ಲಾಂಗ್ ಡ್ರೈವ್ ಹೋಗೊಣ ಎಂದು ಮಾತಾಡಿಕೊಂಡು ಇದ್ದವರಲ್ಲೆ ಏಳು ಜನ ಹೋರಡಲು ಮುಂದಾದೆವು

ಈ ಪ್ಲಾನ ರೂವಾರಿ ಯಾದ ಅಭಿ ಇನ್ನೂ ಉಳಿದ ಸ್ನೇಹಿತರಾದ ರವಿ,ಶರತ್,ತಂಗಮ್,ಕಲಾಭಂಡರ್ ಆದರ್ಶ , ಹಾಗೂ ಆದರ್ಶ ಮುನ್ನುಗ್ಗಿದೆವು ಇಗೆ ನಮ್ಮ ಪಯಣದ ಸಿದ್ಧತೆ ಶುರುವಾಯಿತು ಕಾರ್ ರೆಡಿ ಮಾಡಿ ಪೆಟ್ರೋಲ್ ಹಾಕಿಸಿ ಪಯಣ ಮೈಸೂರಿನಿಂದ ಮಡಿಕೇರಿ ಯತ್ತ ಶುರುವಾಯಿತು ಹೀಗೆ ಮುಂದುವರಿದು ದಾರಿಯಲ್ಲಿ ಸಾಗುತ್ತ ಹೋದೆವು ನಂತರ ಮೊದಲೇ ಊಟ ಮುಗಿಸಿದ್ದ ಕಾರಣ ನಡುವೆ ಪರಿಚಿತ ನೊಬ್ಬರನು ಸಂದಿಸಿ ಕುರುಕಲು ತಿಂಡಿ ತಿಂದು ಮುನ್ನಡೆದೆವು ಆದರೆ ದಾರಿಯಲ್ಲಿ ಪ್ಲಾನ್ ಬದಲಾಯಿತು ನಿಸರ್ಗಧಾಮ ಭೇಟಿ ಕೊಡುವ ಎಂದು ತೀರ್ಮಾನವಾಯಿತು ಸಮಯಕ್ಕೆ ಮುಂಚೆ ತಲುಪಿದ ಕಾರಣ ಕಾರಿನಲ್ಲಿ ನಿದ್ರಿಸಿ ಬೆಳಕಾಗುತ್ತಿದ್ದಂತೆ

ನಮಗೆ ಅನುಭವವಾದ ವಿಚಿತ್ರದಿಂದ ಅದನ್ನು ಬಿಟ್ಟು ವಾಪಸ್ ಆಗುವ ನಿರ್ಧಾರ ಮಾಡಿದೆವು,
ಅದೆ ಒಬ್ಬ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ನಿಂತು ತಲೆಗೆ ಹೆಲ್ಮೇಟ್ ದರಿಸಿ ಶರವೇಗದಲ್ಲಿ ಚಲಿಸುವ ಲಾರಿಯನ್ನು ತಡೆ ಇಡಿದು ನಿಲ್ಲಿಸುತ್ತಿದ್ದ ನಮಗೆಲ್ಲ ಅವನ ಕೆಲಸ ನೋಡಿ ಮೈಎಲ್ಲ ಜುಮ್ಮುಎನಿಸಿದ್ದು ಸುಳ್ಳಲ್ಲ, ಅಲ್ಲೇನು ನಡೆಯುತ್ತಿದೆ ಎಂದು ನೋಡಲು ಮುಂದಾದಾಗ ತಿಳಿದದ್ದು ಅವನು ಮಾನಸಿಕ ಅಸ್ತವ್ಯಸ್ತ ಎಂದು ಹಾಗೂ ಗಂಟಲು ತುಂಬಾ ಕುಡಿದಿದ್ದ ನಂತರ ಕಾರಿನಿಂದ ಇಳಿದು ವಿಚಾರ ತಿಳಿದು ಇಲ್ಲಿ ಉಳಿಯುವುದು ತರವಲ್ಲ ಎಂದು ವಾಪಸ್ ಹೋಗಲು ನಿರ್ಧರಿಸಿದೆವು ನಂತರ ಬೆಳಗಾಗುವರಿಗೆ ಕಾಯ್ದು ನಂತರ ಪಯಣ ಮುಂದುವರಿಸಿದೆವು‌‌. ಯಾವುದೊ ಲಾರಿಯ ಆಯುಧ ಪೂಜೆ ಆಹಾರ ವಾಗುತ್ತಾನೊ.

ಜಗದೀಶ್ ಜಾಗ್ವಾರ್

ಉದ್ದಾ ಜಡೆಯ ಹುಡುಗಿ….?

ಪ್ರತಿ ರಾತ್ರಿ ಕನಸಿನಲ್ಲಿ ಬಂದು ಕಾಡುವ ಆ ಹುಡುಗಿ ಯಾರು ಯಾರಿರಬಹುದು ಇವಳ ಅವಳ ಎಂಬ ಗೊಂಜಲು, ಕನಸಿನ ಬೆಡಗಿಯ ಬೆಳದಿಂಗಳ ನೋಟವ ನೊಡುವ ಅಂದವೇನು ಆ ಚೆಂದವೆ ಬೇರೆ, ಆ ಅಂದವೆ ವರ್ಣಾನಾತಿಥ ಕನಸಿನ ಲೋಕದ ಕಿನ್ನರಿ ನನ್ನ ಬಾಳಿನ ಬೆಳದಿಂಗಳ ಬಾಲೆ. ಎಷ್ಟೇ ಹೇಳಿದರು ಕಡಿಮೆ, ಪ್ರತಿ ರಾತ್ರಿ ಕನಸಿನಲ್ಲಿ ನಾನೇಲ್ಲೊ ಕಳೆದು ಹೋಗಿರುತ್ತೇನೆ ಆಗ ದೇವತೆಯಂತೆ ಬಂದು ನಾ ಕೇಳಿದ ವರ ಕಲ್ಪಿಸಿ ಕರೆದೊಯ್ಯವ ಅವಳ ಮುಖ ನೆನಪಿಗೆ ಬಾರದು ಎಲ್ಲಾ ನೆನಪಿರುವುದು ಅವಳ ಉದ್ದಾ ಜಡೆ, ಕುದುರೆ ಮೇಲೆ ಕುಂತೂ ಹೋರಟಗ ಆಕೆಯ ಜಡೆಯ ನೆವರಿಸಿ ಅವುಗಳ ಗಾಳಿಯ ನರ್ತನದಲ್ಲಿ ಮಿಂದೆಳುವಾಗ ಸ್ವರ್ಗ ಎಂದರೆ ಅದೆ ಎಂದೆನಿಸುತ್ತದೆ. ಇನ್ನೇನು ಸಿಕ್ಕಳು ಎಂದಾಗ ನಿದ್ರದೇವಿ ನಾಂದಿಯಾಡಿರುತ್ತಳೆ. ರಾತ್ರಿಯ ಕಾಡಿನ ಆ ಓಟದಲ್ಲಿ ಬೆಳದಿಂಗಳ ಬೆಳಕಲ್ಲಿ ಕೆಲವೊಮ್ಮೆ ಮಳೆಯಲ್ಲಿ ಆಕೆಯ ಜೊತೆ ಸುಮ್ಮನೆ ಹೊರಡುತ್ತಿದ್ದೆ.
ಆ ದಾರಿಯಲ್ಲಿ ಗುರಿಯ ಕಾಣದೆ ಯಾವ ನೋವು ಸಂಕಟವಿಲ್ಲದೆ ಸ್ವರ್ಗದ ಸಂಪಿಗೆ ಸುವಾಸನೆಯಲ್ಲಿ ಅವಳ ಬೆನ್ನ ಮೇಲೆ ಪುಟ್ಟ ಮಗುವಿನಂತೆ ಮಲಗಿ ದಾರಿ ಸಾಗುತ್ತಿತ್ತು,
ದಾರಿಯ ಉದ್ದಕ್ಕೂ ಸುಶ್ರಾವ್ಯ ಸಂಗೀತ ದಾರಿಯಲ್ಲ ಆಕಾಶದ ನೀಲಿ ಹೂಗಳ ರಾಶಿ, ಮೌನದಿ ಮಗುವಾಗುವಂತೆ ಕಳೆದೊಗುತಿದ್ದೆ ಆಕಾಶದಲ್ಲಿ ಚೆಂದ್ರನು ನಾಚುತಿದ್ದ ನಮ್ಮಿಬ್ಬರ ಮೆರವಣಿಗೆ ನೋಡಿ. ಈ ನಡುವೆ ಬರುತ್ತಿದ್ದ ಆಕಾಶ ನೀಲಿ ಹೂಗಳ ಮಳೆಯಲ್ಲಿ ಮಿಂದಗಾಲೆ ಸಾಕ್ಷ್ಯತ್ಕಾರದ ಅನುಭವ.
ಈ ಮಧ್ಯೆ ಅಶ್ವವು ಹಾದಿಯಲ್ಲಿ ಹೂಗಳ ಮೇಲೆ ಪಾದಗಳ ಹೆಜ್ಜೆ ಗುರುತ ಕರುಣಿಸಿ ಹೊರಟಿತ್ತು ಹಾದಿ ಅಂತ್ಯವಾಗುತ್ತಲೆ ಕೆರೆಯು ಬಳಿ ಬರಲು ತನ್ನ ರೆಕ್ಕೆಗಳ ಬಿಚ್ಚಿ ಗಾಳಿಯ ವಿರುದ್ಧ ಸಮರಕ್ಕೆ ಸಜ್ಜಾಗುತ್ತಿತ್ತು ಈ ನಡುವೆ ದೇವತೆ ಅಶ್ವದ ಇಡಿತ ಬಿಗಿಮಾಡುತ್ತಿದ್ದಳು ಅಶ್ವವು ಮೆಲ್ಲನೆ ರೆಕ್ಕೆಗಳ ಗಾಳಿಗೆ ತೆಲಿಸುತ್ತ ನೀರಿನಲ್ಲಿ ಮುಂಗಾಲುಗಳ ಈಜಿಸುತ್ತ ಆಗೆ ಗಾಳಿಗೆ ರೆಕ್ಕೆಗಳ ವೊಡ್ಡುತ್ತ ಗಗನದತ್ತ ರೆಕ್ಕೆಗಳ ಬಡೆಯುತ್ತಿತ್ತು ಗಗನದ ತಂಗಾಳಿಯಲ್ಲಿ ಹೊರಟ ನಮ್ಮಿಬ್ಬರ ಪಯಣ ಚೆಂದ್ರನ ಮೇಲೆ ನಿಲ್ಲುತ್ತಿತ್ತು.
ಎನ್ನುವಾಗಲೆ ದಿಢೀರನೆ ಕಂಪನ ಶುರುವಾಯಿತು ಏನೆಂದು ನೋಡಲೂ ಎಚ್ಚರ ಗಂಟೆ ಮೊಳಗಿತ್ತು ನನ್ನ ಕನಸು ಅಲ್ಲಿಗೆ ಎಂದಿನಂತೆ ಭಗ್ನವಾಯಿತು ಉದ್ದಾ ಜಡೆಯ ಮಾಯಂಗಿನಿ ಮಾಟದಲ್ಲಿ ಕಳೆದು ಹೊಗುವ ಹುಚ್ಚು ಯೌವನದ ಹತ್ತಾರು ಆಸೆಗೆ ಅವಳೆ ಉತ್ತರ ಉಳಿದದ್ದೆಲ್ಲ ಕೇವಲ ನಿರುತ್ತರ….?

A library without books

By R.K Narayan
5th April 1953
(Art.)

I AM generally put off by the expression Library movement. The very word “movement” endows the whole business with an abstract, unreal air. It produces in one’s mind a picture of humanity, jammed together, moving in a mass towards a goal – a very impressive picture no doubt, but having nothing to do with the business of reading. Or am I mistaken in thinking that the champions of the library movement are interested in the business of reading? Library science seems all concerned with furniture, locks, keys, registers, vouchers, and statistics, everything except reading. The most noticeable deficiency in any library to-day seems to be lack of propaganda for books themselves. It would be useful to inscribe on every library-wall the motto: “Books are meant to be read and not merely to be classified and preserved.” In every library elaborate rules are being framed for the borrowing and returning of books. There is a university library that I visit, where there are so many regulations for book-borrowing that few ever find the time to go in and borrow a volume.you have to spend half an hour before you get through the formalities of picking up a book from the shelf, and another half an hour before you can get through the various entries and signatures and go out of the library. Compared to this the ceremony of getting through a custom’s inspection looks like child’s play. In every library there are so many involved technicalities for this transaction that I sometimes wonder if they would not do better to keep dummy books with gilt titles in sealed almirahs, so that they may only be seen and counted and never taken out, which seems to be the best way of keeping a library secure, above reproach from auditors, and with unimpeachable stock registers.

The great handicap for the libraries now is that governments have begun to take an interest in them, and eminent men utilize them as thems for grandiose speeches. As a result of it most library efforts get entangled in red-tape, and become a matter of cess, Authority, statistics, and funds.

Recently when I visited a certain important town I saw a new library-building coming up at fevrish speed. The name-boards of the architect, contractor, electrician, and sanitary engineers, stood up on all sides of the compound in letters of the gold. The group was swept, lawns were laid and waterd desperately, and all workmen were finishing up their tasks by gas light. I felt pleased: the thought that someone was hurrying on at a desperate speed to provide cultural amenities to the townsmen was a very pleasant and sustaining thought. I felt that you couldn’t see that zest in any other part of the world. I felt that the friendship of those who were responsible for this was worth cultivating. I sought them out and expressed my feelings. They were naturally pleased with the compliment and were willing to give me all the facts connected with it. I learnt that the building was costing them two lakhs of rupees. They gave me the names of all technicians who were at work there, and concluded, “According to the terms of the contract the building must be handed over to us by the tenth of this month.”

“Why such a firm date?”

“Otherwise it will be no use for us. Sri, …… Will be passing this way on the tenth and he was agreed to perform the opening ceremony. If the building is not in our hands on the date it will be practically useless for us afterwards.” I could not accept the statement. “Why do you say it will be useless? You may always stock the books and start using the building any moment, irrespective of whether an eminent man is passing this way or not.”

“Oh, books!” he said. “We are not bothered about that now. We are thinking of only the opening ceremony.” I could not help asking, “when are you going to bother about it, anyway?”

“Oh can’t say. It Will depend upon the funds available at the end of all this.”

“If and when you decide to admit books into the library what will be your procedure for acquiring them?”

“We will probably call for tenders for the supply of books. We want to encourage the local booksellers and distribute the patronage evenly.”

I couldn’t help asking ” How are you going to select the volumes?”

“We shall leave it to the booksellers. We shall first measure the total shelf-space, get an approximate idea of the number of volumes required to fill them, and call for quotation for the supply of this quantity. Anyway we are not going to worry about this detail now. Our first requirement is building and furniture. After that we must find funds for spending up someone for library training, for which we are already receiving numerous applications.”

And so I gathered the fallowing facts and figures about the library:

Building Rs.2,00,000; Lighting Rs.15,000; plumbing etc. Rs.12,000; Garden lay-out and supervisors’ charges Rs.5,000; counters, shelves and furniture Rs.30,000; opening ceremony; printing of invitations, welcome address, president’s speech, and secretary’s report Rs.2,000; pandal and tea Rs.4,000 and Books No budget yet.

There I shall leave it without further comment.

Source
Book
The Hindu speaks on libraries
Printed at allied publishers Ltd.
©Kasturi & sons Ltd.1992

ನನ್ನವಳು

ಪ್ರೀತಿಯ ಗೆಳತಿ
ವಿರಹದ ಬಿಸಿಯ
ತಾಳಲಾರೆ ಪೋಲಿ
ಹೃದಯ ತಾಳಹಾಕುತ್ತಿದೆ…1

ವಿರಹ ತಣಿಸುವಿಯ,
ಬೇಸಿಗಿಯ ಚಳಿಯ
ಚಿಗುರಿನ ಬಿಸಿಯ
ಮಳೆಯ ಕಾವನ್ನು ತಣಿಸುವೆಯ…2

ಕೆಂಪು ಗುಲಾಬಿಯ
ಹೂ ಮೈಯಲ್ಲ
ಸೋಕಿ ಬರಲು
ನಾಚಿಕೆ ನವಿಲಾಗಿದೆ…3

ಎಷ್ಟು ಹೇಳಲಿ
ಕೂದಲ ಕಪ್ಪು
ಅಂದ ಅರಳಿಸಿದೆ….4

ಒಮ್ಮೆ ಪ್ರೀತಿಸು,
ಕಿವಿ ಕಚ್ಚಲೆ
ಮೂಗುತ್ತಿಗೆ ಮುತ್ತಿಡುವೆ
ಜಡೆ ಸರಿಸೆ ಕತ್ತ ಸೋಕುವೆ…5

ಎದೆಯ ಮೇಲೆ
ತಲೆ ಇರಿಸಿ
ಕಾಪಿಟ್ಟು ಕೊಂಡು
ಹಣೆಯ ನೇವರಿಸುವೆ..6

ದಿನಕ್ಕೊಂದು ಕಥೆ
ಹೇಳಿ ಮನಗಿಸುವೆ
ಸಿಗಬಾರದೆ…7

ಜಗದೀಶ್ ಜಾಗ್ವಾರ್

Journalist journey

ಯಾರದ್ದೋ ಹಣ
ಇನ್ಯಾರೊ ತಿಂದರು
ನಿನ್ಯಾಗಕೊ….1

ಎಡಕ್ಕು ಇಲ್ಲ
ಬಲಕ್ಕು ಇಲ್ಲ
ಎಲ್ಲಾ ದಿಕ್ಕಿಗೂ ದೇವರಾದೆ..2

ಕಾಣದ ಕೈಗಳ
ಅಧಿಕಾರ ಅವ್ಯವಹಾರಗಳ
ವಿರುದ್ಧ ಸಿಡಿದು ನಿಂತೆ…3

ನಗ್ನ ನೀಲಿಯ
ನೀಪುಣ ನೀನು
ನೀನಾಗೆ ಸೋಲುಂಟೆ…4

ಸುದ್ದಿಯ ಸಾಮ್ರಾಟ
ವರದಿಗಳ ವೀರ
ಅಂಕಣಗಳೆ ಆಹಾರ
ಹೇ ಚತುರ…5

ತಲೆ ಬಗ್ಗಿಸ ಬ್ಯಾಡೊ
ನೀ ಅಪರಾಧಿಯಲ್ಲ
ಬೀಳಿ ಮನೆಯ ಸಾಹುಕಾರ…‌6

ಸಮಾಜವನ್ನೆ ತನ್ನ
ಸಂಸಾರ ಎಂದೆ
ಎಲ್ಲಾರನ್ನು ಪ್ರೀತಿಯಿಂದ ಕಂಡೆ…7

ಅಣ್ಣನಾದೆ, ಅಪ್ಪನಾದೆ
ಜೀವನದ ರಂಗಭೂಮಿಯಲ್ಲಿ
ತೋಡದ ವೇಷವಿಲ್ಲ
ಆಡಾದ ಮಾತಿಲ್ಲ…8

ಮಾತಿನ ಮಾಂತ್ರಿಕ ನೀನು
ಮನಸ್ಸು ಗೆಲ್ಲುವೆ
ಮನ್ವಂತರಗಳು ದಾಟಿದರು
ಆಚಾಲ ನೀನು…9

ಜಗದೀಶ್ ಜಾಗ್ವಾರ್

ಪ್ರೀತಿ ಎಂಬುದು ಹೆಸರಲ್ಲ…..?

ಪ್ರೀತಿ ಎಂಬುದು ಕೇವಲ ಹೆಸರಲ್ಲ ಅದು ಭಾವನೆ ಅಥವಾ ಕಲ್ಪನೆಗೆ ಸಿಗದ ಭಾವನೆಗಳ ಗುಚ್ಛ ಇದರ ಹುಚ್ಚಿನಲ್ಲಿ ಲೋಕ ಗೆದ್ದವರು ಇದ್ದಾರೆ, ಕಾಣೆಯಾದವರು ಇದ್ದಾರೆ ಆದರೆ ಇವುಗಳೆಲ್ಲದರ ನಡುವೆ ನಾನಗೆ ಕಂಡ ಅಪರೂಪದ ಜೋಡಿಗಳು “ಆಕೆ ಮತ್ತು ಆವನು” ಪ್ರೀತಿ ಪ್ರೇಮ ಎಂಬ ಹೆಸರಿನ ಮೌಲ್ಯಕ್ಕಾಗಿ ಬದುಕುತ್ತಿರುವಾವರು ಎಂದು ಹೇಳಬಹುದು. ಕಣ್ಣು ಕಾಣದ ಅವಳಿಗೆ ಅಪ್ಪನೆ ಎಲ್ಲಾ ದೇವರು-ವಿಧಿ ಈ ಎರಡರಲ್ಲಿ ಯವುದೊ ಒಂದರಿಂದ ಇವಳ ಕಣ್ಣಿನ ಜೊತೆ ಆಕೆಯ ಹುಟ್ಟಿನಲ್ಲೆ ತಾಯಿಯನ್ನು ಕಿತ್ತುಕೊಂಡಿತು ಆಗೊ ಇಗೊ ಮಾಡಿ ಟೈಪಿಂಗ್ ಕಲಿತು ಸರಕಾರಿ ನೌಕರಿ ಗಿಟ್ಟಿಸಿದ್ದಳು ಇನ್ನು ಅವನು ಕೈ ಇಲ್ಲದವ ಹೊಟ್ಟೆ ಪಡಿಗೆ ಮಕ್ಕಳಿಗೆ ಪಾಠ ಕಲಿಸುತ್ತಿದ್ದ.
ಇಗಿದ್ದ ಇವರಿಬ್ಬರ ಜೀವನದಲ್ಲಿ ಒಮ್ಮೆ ಆಕೆ ತನ್ನ ಹುಟ್ಟುರಾದ ಭಾವನೆಗಳ ಊರಿಗೆ ಹೋದಳು ಅಲ್ಲಿ ಆಕೆಗೆ ಆಕಸ್ಮಿಕವಾಗಿ ಸಿಕ್ಕವನೆ ಅವನು, ಸರಕಾರಿ ಕಛೇರಿಯಲ್ಲಿ ಅವರಿಬ್ಬರ ಬಗ್ಗೆ ಅವರಿಗೆ ತಿಳಿದು ಇಬ್ಬರಲ್ಲು ಏನೋ ತಿಳಿಯದ ಹಿಂಸೆ, ಸಂತೋಷ, ತುಡಿತ, ಆಸೆ ಆದರೆ ಅವನು ಏನಾಂತನೊ, ಇಲ್ಲ ಇವಳು ಏನಾಂತಳೊ ಎಂಬ ಭಯ ಒಂದು ಕ್ಷಣ ಇಬ್ಬರೂ ಬೇವತು ಹೋದರು.
ನಂತರ ಅವನೆ ಚೂರು ಧೈರ್ಯ ಮಾಡಿ ಗೆಳೆಯನಾಗಲು ಪೀಠಿಕೆಯಾಕಿದ ಆಕೆಗೆ ಬೇಕಿದದ್ದು ಅದೆಯಾದ ಕಾರಣ ಅಲ್ಲಿಗೆ ಒಂದು ಸೂತ್ತಿನ ಪ್ರೇಮಕಾವ್ಯ ರಚನೆ ನಡೆದಿತ್ತು
ಎರಡನೆ ಸೂತ್ತಿಗೆ ಮದುವೆ ಹಂತ ತಲುಪಿದಾಗ ಅವನ ತಾಯಿಯ ಅನಕ್ಷರತೆಯಿಂದ ಮದುವೆ ಮಾತು ಮನೆಯಲ್ಲಿ ಮುರಿದು ಬಿಳುವಾಗ ಸೂಕ್ತ ಸಲಹೆ ಮೇರೆಗೆ ತಾಯಿಯನ್ನು ಒಪ್ಪಿಸಿ ಮಕ್ಕಳು “ದೇವರ ಮಕ್ಕಳಂತೆ” ಜನಿಸುವುದಿಲ್ಲ ಎಂದು ತಿಳಿ ಹೇಳಿದಾಗ, ಮದುವೆಯ ಮೂರನೆ ವರ್ಷಕ್ಕೆ ಮಾನವ ಕುಲಕ್ಕೆ ನಾಂದಿ ಹಾಡುವ ಬಾಲಕ ಜನಿಸಿದ್ದ ಅವನೆ ಮಾನವ.

ಜಗದೀಶ್ ಜಾಗ್ವಾರ್

“Kannada Desha Paksha”

On March 23, 1987, the first Women’s conference was organised in Karnataka. Thousands of women farmers participated in the conference and protested against the exploitations on them. In the same year, the Farmer’s Association formed “Kannada Desha Paksha” a Regional Political Party with the support of Kannada, Dalith and Labour organisations. Prof Nanjundaswamy and N D Sundaresh were elected as President and General Secretary respectively.

(Courtesy-Prof Nanjundaswamy FB page)

ನಮ್ಮಮನೆಯಲ್ಲಿ ನಾವು ಭೀಕ್ಷಕರು

ನಮ್ಮದೆ ಮನೆ
ನಮ್ಮವರದೆ ಮನೆ
ಆದರೆನು ಬಂತು ನಾವಿಲ್ಲಿ
ಭೀಕ್ಷಕರು, ಭೀಕಾರಿಗಳು…..1

ನಮ್ಮದೆ ಜನರ ಮೂರ್ಖತನದಿಂದ
ಸ್ವರ್ಥದಿಂದ ನಮ್ಮನ್ನೆ ನಾವು ಕಿತ್ತುತಿಂದು
ಇನ್ಯಾವುದೋ ದೆಹಲಿ ಮನೆಬಂದು
ನಮ್ಮ ಮನೆ ಕಟ್ಟಬೇಕಿದೆ…..2

ನಮ್ಮ ಮನೆಯ ನೀರಿಗೆ ದೆಹಲಿ ಪಾಳೆಗಾರರು
ನಿತ್ಯ ಊಟಕ್ಕೂ ಅವರದೆ ಒಗ್ಗರಣೆ
ನಮ್ಮ ಮನೆ ನೀರಿನಲ್ಲಿ ಮುಳುಗಿದರು
ನಾವು ಮೂಕ ಪ್ರೇಕ್ಷಕರು…..3

ದೆಹಲಿಯ ದಾಸರು
ಕಾರಣ ನಮ್ಮ ಮನೆಯ ದಳಗಳು
ದೋಚುವುದರಲ್ಲಿ ನಿಂತರೆ, ನಮ್ಮ ಹಣೆಬರಹಕ್ಕೆ
ನಮ್ಮದೊಂದು ಸ್ವಂತ ಸರಕಾರವಿಲ್ಲ ದೆಹಲಿಯ
ಬೆವರಿಳಿಸಲು…..4

ನಮ್ಮ ಮನೆಯ ಸ್ಥಿತಿಗೆ ನಾವೆ ಕಾರಣ
ಐದಾಕ್ಕೆ ಒಮ್ಮೆಯಾದರೂ ಎದ್ದು NOTA
ಒತ್ತಿ ಪಾಪ ಕಳೆದುಕೊಳ್ಳಿ, ಹೊಸ ಅಲೆಗಳು,
ಹೊಸ ನಮ್ಮದೆ ಜನರ ಸರಕಾರ ಕಟ್ಟಿ…..5

ನಮ್ಮ ಮನೆಗೆ ನಾವೆ ಯಾಜಮಾನರಾಗೋಣ
ನಮ್ಮ ಮನೆಯ ಕಟ್ಟೋಣ
ಇಡೀ ಭಾರತ ತಿರುಗಿ ನೋಡುವಂತೆ
ಅಭಿವೃದ್ಧಿ ಹೊಂದೊಣ…..6

ನಮ್ಮ ಸ್ಥಿತಿಗೆ ನಾವೆ ಕಾರಣ
ಇನ್ನಾದರೂ ಎಚ್ಚೆತ್ತುಕೊಳ್ಳಿ ಕನ್ನಡಿಗರೆ
ಇನ್ನಾದರೂ ಎಚ್ಚೆತ್ತುಕೊಳ್ಳಿ
ನಡೆಯಿರಿ ಹೊಸ ದಿಕ್ಕಿಗೆ, ಹೊಸ ನಾಡಿಗೆ…..7

ಬದಲಾಗು ಕರುನಾಡ
ಬದಲಾಗು, ಇನ್ನಾದರೂ
ಯೋಚಿಸು, ಎದ್ದೇಳು…..8

ಜಗದೀಶ್ ಜಾಗ್ವಾರ್