ಅರವಿಂದ ಸಮೇತ ವೀರ ರಾಘವ,

ಚಿತ್ರದ ಕೊನೆಯ ಬಹುಮುಖ್ಯ ,  ಸಂಭಾಷಣೆಯನ್ನು ನನಗೆ ಇಷ್ಟವಾದ ಕಾರಣ ತೆಲುಗಿನಿಂದ ಕನ್ನಡಕ್ಕೆ ಅನುವಾದ ಮಾಡಿರುತ್ತೆನೆ.

ಅನುವಾದ ಬಿ ಎಚ್ ಶ್ರೀ

ಏನು ಬರೀಲಿ ಅವಿ
ಇಬ್ಬರೂ ಮನಷ್ಯರು ಸಾಯ್ತ ಇದ್ದಾರೆ, ಅಂದ್ರೆ
ಇನ್ನಿಬ್ಬರು ನಿಂತು ನಾಟಕ ನೋಡೋ ಊರಿದು,
ಹೊಸದಾಗಿ ಏನು ಬರೀಲಿ ಅಂತೀಯ….‌1

ಇವನ ಐದು ವರ್ಷದ ಮಗುವಿನ
ಭವಿಷ್ಯ ಕೂಡ ಇವನೆ ಬರೀತಿದಾನೆ
ಬಾಂಬುಗಳಂತೆ, ಜೈಲಿಗೆ ಹೋಗಬೇಕಂತೆ
ಬೇಲಿನ ಮೇಲೆ ಬದುಕಬೇಕಂತೆ…2

ಆಗ ಅದೇ ಬಾಂಬ್ ಅವನ ಕೈಯಲ್ಲೆ ಸಿಡಿದರೆ
ಒಂಟಿ ಕೈ ಸುಬ್ಬನಿಗೆ ಇನ್ನೊಬ್ಬ ಒಂಟಿ ಕೈ ಸುಬ್ಬ
ಏನು ಬರೀಲಿ ಇವರಬಗ್ಗೆ….3

ರೋಷ ತುಂಬಿರೊ ಕಣ್ಣೀರಿನ ಬೀದಿಗಳು
ಒಣಗಿದ ಮಾವಿನ ಕಾಯಿ ನೇತಾಡೋ ಮನೆಗಳು
ನಿಶ್ಯಬ್ದವಾಗಿ ಅಳುವ ಊರುಗಳು…4

ಇವರು ರಕ್ತದಿಂದ ರುಜುವಾಕಿರೊ ಸೀಮ ಇದು
ಹೊಸದಾಗಿ ಇನ್ನೇನು ಬರೀಲಿ ಅವಿ….5

ರಕ್ತ ಹರಿದ ನೆಲದ ಮೇಲೆ ಹೂ ಬೆಳಿಬೇಕಂತ ನಾನು
ಇಲ್ಲ ಕತ್ತಿಗಳೆ ಘರ್ಜಿಸ್ತವಾಂತ ಅವನು
ಏನು ಉಳಿದಿದೆ ಬರಿಯೋಕೆ….6

ಇಬ್ಬರೂ ಬದುಕಬೇಕು ಅಂದ್ರೆ
ಮೂರು ಜನರನ್ನ ಸಾಯಿಸಬೇಕಾ

ಇದು ನಾನು ಬಯಸದ ಯುದ್ಧ
ಇಲ್ಲಿ ಸಾವು, ನೋವಿನದ್ದು ಒಂದೇ ಶಬ್ದ
ಏನು ಬರೀಲಿ ಅವಿ…7

CREDITS: ಮಾತಿನ ಮಾಂತ್ರಿಕ ತ್ರಿವಿಕ್ರಮ್